news & events
ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯರಿಗೆ "ವಿಶ್ವಕರ್ಮ ಶ್ರೀ" ಪ್ರಶಸ್ತಿ ಪ್ರದಾನ
ಪರಮಪೂಜ್ಯ ಅನಂತಶ್ರೀ ವಿಭೂಷಿತ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು, ಪೀಠಾಧಿಪತಿಗಳು ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠ ಅರೆಮಾದನಹಳ್ಳಿ, ಹಾಸನ ಜಿಲ್ಲೆ ಹಾಗೂ ಶ್ರೀ ಸ್ವಾಮಿ ಬುದ್ಧಾತ್ಮಾನಂದ ಸರಸ್ವತಿ, ಪೀಠಾಧಿಪತಿಗಳು ಶ್ರೀಮದ್ ಪರಸಮಯ ಕೋಲರಿನಾಥರ್ ಅಧೀನಂ ಇವರ ದಿವ್ಯ ಉಪಸ್ಥಿತಿ ಹಾಗೂ ಶುಭಾಶೀರ್ವಚನಗಳೊಂದಿಗೆ, ಸಹಕಾರ ರತ್ನ, ವಿಶ್ವಕರ್ಮ ನಾಡೋಜ ಡಾ| ಬಿ.ಎಂ. ಉಮೇಶ್ ಕುಮಾರ್ ಸಂಸ್ಥಾಪಕ ಕಾರ್ಯಾಧ್ಯಕ್ಷರು ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನ ರಿ. ಬೆಂಗಳೂರು ಇವರ ನೇತೃತ್ವದಲ್ಲಿ ದಿನಾಂಕ 26.9.2025 ರಂದು ರವಿಂದ್ರ ಕಲಾಕ್ಷೇತ್ರ, ಬೆಂಗಳೂರಿನಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಬೃಹತ್ ಶ್ರೀ ವಿರಾಟ್ ವಿಶ್ವಕರ್ಮ ಮಹೋತ್ಸವದ ಸಂದರ್ಭದಲ್ಲಿ ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯ ಇವರಿಗೆ ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ "ವಿಶ್ವಕರ್ಮ ಶ್ರೀ" ಪ್ರಶಸ್ತಿ ಪ್ರದಾನ ಮಾಡಿರುವುದು. ಈ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಪದ್ಮಶ್ರೀ ಡಾ| ಚಂದ್ರಶೇಖರ ಕಂಬಾರ, ಶ್ರೀ ಬಿ.ವೈ ವಿಜಯೇಂದ್ರ, ರಾಜ್ಯಾಧ್ಯಕ್ಷರು ಭಾರತೀಯ ಜನತಾ ಪಕ್ಷ, ಪ್ರಖ್ಯಾತ ಮನೋವೈದ್ಯರು ಹಾಗೂ ವೈದ್ಯ ಸಾಹಿತಿಗಳಾದ ಪದ್ಮಶ್ರೀ ಡಾ| ಸಿ.ಆರ್ ಚಂದ್ರಶೇಖರ್, ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಮುಂತಾದ ಗಣ್ಯಾತಿಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
*ದೇವಮಾನವ ಕೀರ್ತಿ ಶೇಷ ಪಾಲ್ಕೆ ಬಾಬುರಾಯಾಚಾರ್ಯರ ತ್ಯಾಗ, ಸೇವೆ, ಸಮರ್ಪಣಾಭಾವಗಳ ನೆನಪು ಬದುಕಿಗೆ ದಾರಿದೀಪವಾಗಬೇಕು*-ಬಿ. ಎ. ಆಚಾರ್ಯ, ಅಧ್ಯಕ್ಷರು, ವಿಶ್ವಕರ್ಮ ಎಜ್ಯುಕೇಶನ್ ಟ್ರಸ್ಟ್
ಮಂಗಳೂರು: ದೇವಮಾನವ ಕೀರ್ತಿ ಶೇಷ ಪಾಲ್ಕೆ ಬಾಬುರಾಯಾಚಾರ್ಯರ ತ್ಯಾಗ, ಸೇವೆ, ಸಮರ್ಪಣಾಭಾವಗಳ ನೆನಪು ಬದುಕಿಗೆ ದಾರಿದೀಪವಾಗಬೇಕು. ದೇವಮಾನರೆಂದೇ ಕರೆಯಲ್ಪಡುವ ಪಾಲ್ಕೆ ಬಾಬುರಾಯಾಚಾರ್ಯರು‘ಸರಳ ಜೀವನ, ಉದಾತ್ತ ಚಿಂತನೆ’ ಇದು ಅವರ ಬದುಕಿನ ಬಹುಮುಖ್ಯ ಮೌಲ್ಯವಾಗಿತ್ತು “ಇಂದಿಗೂ ಸಾವಿರಾರು ಜನರ ಹೃದಯದಲ್ಲಿ ಪಾಲ್ಕೆ ಬಾಬುರಾಯಾಚಾರ್ಯರು ಜೀವಂತವಾಗಿದ್ದಾರೆ. ಅವರನ್ನು ದೇವಮಾನವನಾಗಿಸಿದ ಮೌಲ್ಯ ಅದು ‘ಧರ್ಮ’. ಪಾಲ್ಕೆಯವರು ಪ್ರಾಜ್ಞರ ಸಹವಾಸ, ಸಹಕಾರದಿಂದ ಧರ್ಮವನ್ನು ಅರಿತು ಆಚರಿಸಿದವರು, ಎಲ್ಲರಿಗೂ ಲೇಸನ್ನೇ ಬಯಸುವ ವಿಶಾಲ ಹೃದಯವುಳ್ಳವರಾಗಿದ್ದರು. ಸ್ವಸಮಾಜದ ಬಂಧುಗಳಿಂದ ಮಾತ್ರವಲ್ಲದೆ ಅನ್ಯ ಸಮಾಜದವರಿಂದಲೂ ಅಪಾರ ಗೌರವಕ್ಕೆ ಪಾತ್ರರಾಗಿದ್ದರು.
ಸ್ವಧರ್ಮಾಚರಣನಿಷ್ಠೆ, ಪರೋಪಕಾರ, ಸಹಾನುಭೂತಿ ಈ ಎಲ್ಲಾ ಸದ್ಗುಣಗಳಿಂದ ಅವರಲ್ಲಿ ವಿಶಿಷ್ಟವಾದ ನೈತಿಕ ಶಕ್ತಿ ಜಾಗೃತವಾಗಿದ್ದಿತು. ಅವರಲ್ಲಿದ್ದ ಈ ಶಕ್ತಿಯಿಂದ ಅನೇಕ ಹಿರಿಯ ಮುತ್ಸದ್ದಿಗಳೂ ಆಕರ್ಷಿತರಾಗಿದ್ದರು.
ವಿಶ್ವಬ್ರಾಹ್ಮಣರಲ್ಲಿ ಪೌರೋಹಿತ್ಯ ಅಭ್ಯಾಸ ಮಾಡುವಂತಹ ಆಸಕ್ತಿ ಉಳ್ಳವರಿಗೆ ವೈದಿಕ ಪಾಠ, ಸಂಸ್ಕೃತ ಪಾಠವಾಗಬೇಕು ಎನ್ನುವ ಸದುದ್ದೇಶದಿಂದ ಪಾಲ್ಕೆಯವರು 1957ರಲ್ಲಿ ಮೂಡಬಿದ್ರಿಯ ಆಲಂಗಾರಿನ ನಾಗಲಿಂಗಸ್ವಾಮಿ ಮಠದಲ್ಲಿ ಸಂಸ್ಕೃತ ವೈದಿಕ ಪಾಠ ಶಾಲೆಯನ್ನು ಪ್ರಾರಂಭಿಸಿದರು. ಒಂದು ಸಮಾಜದ ಸುಸಂಸ್ಕೃತಿ, ಸಮೃದ್ಧಿ, ಸಮಾಜದ ಜ್ಞಾನಸಂಪನ್ನತೆ, ಜ್ಞಾನನಿಷ್ಠೆಯ ಸೂಕ್ಷ್ಮವನ್ನು ಗ್ರಹಿಸಿದ್ದ ಪಾಲ್ಕೆಯವರು ವಿದ್ಯಾಭ್ಯಾಸ, ಸಾಹಿತ್ಯ, ಕಲೆಗಳ ವಿಕಾಸಕ್ಕೆ ನಮ್ಮಲ್ಲಿ ಅಪೂರ್ವ ಎನ್ನಬಹುದಾದಷ್ಟು ಪ್ರೋತ್ಸಾಹವನ್ನು ಕೊಟ್ಟರು. ಎಂದು -ಬಿ. ಎ. ಆಚಾರ್ಯ, ಅಧ್ಯಕ್ಷರು, ವಿಶ್ವ ಕರ್ಮ ಎಜುಕೇಶನ್ ಟ್ರಸ್ಟ್ ಇವರು ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ - ಆಪರೇಟಿವ್ ಸೊಸೈಟಿ ಲಿ ಆಯೋಜಿಸಿದ್ದ ವಜ್ರ ಮಹೋತ್ಸವ ಮತ್ತು ಸಂಸ್ಥೆಯ ಸ್ಥಾಪಕರಾದ ಪಾಲ್ಕೆ ಬಾಬುರಾಯ ಆಚಾರ್ಯರ ದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರ ಬಿಡಿಸುವ ಸ್ಪರ್ಧೆಯ *ಚಿತ್ರ ಸಿಂಚನ -2025* ಸಮಾರಂಭದಲ್ಲಿ ಶುಭಾಶಂಸನೆಯಲ್ಲಿ ಹೇಳಿದರು. ದೀಪ ಪ್ರಜ್ವಲನೆ ಮಾಡಿದ ದಿ. ಬಾಬುರಾಯ ಆಚಾರ್ಯ ರ ಪುತ್ರ ಕೆನರಾ ಜೂವೆಲ್ಲೆರ್ಸ್ ನ ಶ್ರೀ ಧನಂಜಯ ಪಾಲ್ಕೆ ಯವರು ತನ್ನ ತಂದೆ ಸ್ಥಾಪನೆ ಮಾಡಿದ ಸಂಸ್ಥೆಯಲ್ಲಿ ಅವರ 110 ನೇ ಜನ್ಮ ದಿನಾಚರಣೆಯನ್ನು ಅವರ ಭಾವ ಚಿತ್ರ ಬಿಡಿಸುವ ಮೂಲಕ ಮಾಡಿದ ಎಸ್. ಕೆ. ಜಿ. ಐ. ಸೊಸೈಟಿಯ ಆಡಳಿತ ವರ್ಗ, ಸಿಬ್ಬಂದಿ ವರ್ಗವನ್ನು ಪ್ರಶಂಸಿ, ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರಿಗೂ, ಎಸ್. ಕೆ. ಜಿ. ಐ. ಯ ಎಲ್ಲಾ ಆಡಳಿತ ಮಂಡಳಿಯ ನಿರ್ದೇಶಕರಿಗೆ , ಸಿಬ್ಬಂದಿಯವರಿಗೆ, ಚಿನ್ನದ ನಾಣ್ಯ ಮತ್ತು ಎಲ್ಲಾ ಶಾಖೆಗಳಿಗೆ ಪಾಲ್ಕೆ ಜನ್ಮ ಶತಮಾನೋತ್ಸವದ ಸವಿ ನೆನಪಿನ ಬೆಳ್ಳಿಯ ಸ್ಮರಣಿಕೆ ನೀಡಿದರು. ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಚಿತ್ರ ಕಲಾವಿದರು, ವಿಶ್ವಕರ್ಮ ಕಲಾ ಪರಿಷತ್ ನ ಗೌರವಾಧ್ಯಕ್ಷರಾದ ಪಿ. ಎನ್. ಆಚಾರ್ಯ ಮತ್ತು ಚಿತ್ರ ಕಲಾವಿದೆ ಶ್ರೀಮತಿ ಜಯಶ್ರೀ ಶರ್ಮ ಉಪಸ್ಧಿತರಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್. ಕೆ. ಜಿ. ಐ. ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯರು ವಿಶ್ವಬ್ರಾಹ್ಮಣ ಸಮಾಜದ ದೇವಮಾನವರಾಗಿದ್ದ ಪಾಲ್ಕೆ ಯವರು ಅತ್ಯಂತ ದೂರ ದೃಷ್ಟಿಯಿಂದ ದಶಕಗಳ ಕಾಲದಿಂದ ನಮ್ಮ ಸೊಸೈಟಿ ಮತ್ತು ಅನೇಕ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ ಸಮಾಜದ ಎಲ್ಲಾ ವರ್ಗದ ಜನರನ್ನು ಮುಂದೆ ಬರಲು ಕಾರಣಿಕರ್ತರಾಗಿದ್ದರು. ಇಂದು ಅವರ ಪುತ್ರ ಧನಂಜಯ ಪಾಲ್ಕೆ ಯವರು ತನ್ನ ತಂದೆಯವರ 110ನೇ ಜನ್ಮ ಶತಮಾನೋತ್ಸವದ ಸವಿ ನೆನಪಿಗಾಗಿ ಎಸ್. ಕೆ. ಜಿ. ಐ. ಕೋ- ಆಪರೇಟಿವ್ ಸೊಸೈಟಿಯ ಎಲ್ಲರಿಗೂ ಚಿನ್ನದ ನಾಣ್ಯ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿ, ಪಾಲ್ಕೆ ಬಾಬುರಾಯ ಆಚಾರ್ಯರ ಓರ್ವ ಆದರ್ಶ ಪುತ್ರ ಧನಂಜಯ ಪಾಲ್ಕೆ ಎಂದು ಹೇಳಿದರು. ಈ ಸಂದರ್ಭದಲ್ಲಿ *ಸಹಕಾರ ಶಿಕ್ಷಣ ನಿಧಿ ರೂ. 9,14,143/- ನ್ನು ಕರ್ನಾಟಕ ರಾಜ್ಯ ಮಹಾ ಮಂಡಳಕ್ಕೆ ಮೂಡಬಿದಿರೆ ಕೋ- ಆಪರೇಟಿವ್ ಮ್ಯಾನೇಜ್ಮೆಂಟ್ ನ ಶಿಕ್ಷಕಿ ಬಿಂದು ನಾಯರ್ ಮೂಲಕ ಹಸ್ತಾಂತರಿಸಲಾಯಿತು.*
*ಚಿತ್ರ ಸಿಂಚನ ಸ್ಪರ್ಧೆ ವಿಜೇತರು ಕಿರಿಯರ ವಿಭಾಗ ಪ್ರಥಮ: ಕೀರ್ತನ ಆಚಾರ್ಯ ದ್ವಿತೀಯ : ಅಧಿತ್ , ತೃತೀಯ: ವಿನೀಶ್ ಆಚಾರ್ಯ ಹಿರಿಯರ ವಿಭಾಗ ಪ್ರಥಮ: ಗುರುಪ್ರಸಾದ್ ಆಚಾರ್ಯ, ದ್ವಿತೀಯ : ಬಿಂದು ಕೆ. ,ತೃತೀಯ: ರಂಜಿತ ಜಿ. ಆಚಾರ್ಯ ಇವರಿಗೆ ನಗದು ಮತ್ತು ಸ್ಮರಣೆಕೆ ನೀಡಲಾಯಿತು.*
*ಅಂತಿಮ ಸುತ್ತಿನಲ್ಲಿ ಭಾಗವಹಿಸಿದ ಚಿತ್ರ ಕಲಾವಿದರಿಗೆ ಪ್ರೋತ್ಸಾಹಕ ನಗದನ್ನು ಮಾಜಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿದ್ದ ರಜನಿ ಎಸ್. ಪೈ ನೀಡಿದರು.
ನಿರ್ದೇಶಕರಾದ ವೈ.ವಿ.ವಿಶ್ವಜ್ಞಮೂರ್ತಿ ಪ್ರಾರ್ಥನೆಗೈದರು. ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಆಚಾರ್ಯ ಪ್ರಸ್ತಾವನೆಗೈದು ಸ್ವಾಗತಿಸಿದರು. ನಿರ್ದೇಶಕರಾದ ಕೆ. ಪ್ರಕಾಶ್ ಆಚಾರ್ಯ ವಂದಿಸಿದರು. ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.
ವಿವಿಧಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ
ದಿನಾಂಕ: 24-08-2025 ರಂದು ಜರಗಿದ ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ 2024-2025 ನೇ ಸಾಲಿನ 59 ನೇ ವಾರ್ಷಿಕ ಮಹಾಸಭೆಯಲ್ಲಿ ವಿವಿಧಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ 1) ವೇದಮೂರ್ತಿ ಬ್ರಹ್ಮಶ್ರೀ ಕೆ. ಉಮೇಶ್ ತಂತ್ರಿ (ವೈದಿಕ ಕ್ಷೇತ್ರ), 2) ಶ್ರೀ ಯಶವಂತ ಎಮ್.ಜಿ (ಸಂಗೀತ ಕ್ಷೇತ್ರ), 3) ಶ್ರೀ ಎನ್. ಆರ್. ದಾಮೋದರ ಶರ್ಮಾ (ವಾಗ್ಮಿ), 4) ಶ್ರೀ ಕೆ.ಜೆ. ಗಣೇಶ್ ಆಚಾರ್ಯ (ಯಕ್ಷಗಾನ ಕ್ಷೇತ್ರ), 5) ಶ್ರೀ ಎ.ಜಿ. ಸದಾಶಿವ ಮಂಗಳಾದೇವಿ (ಕಲಾ ಕ್ಷೇತ್ರ), 6) ಶ್ರೀ ಕೆ. ಲಕ್ಷ್ಮೀನಾರಾಯಣ (ಚಿತ್ರಕಲಾ ಕ್ಷೇತ್ರ) ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯ, ಉಪಾಧ್ಯಕ್ಷರಾದ ಶ್ರೀ ಎ. ಆನಂದ ಆಚಾರ್ಯ, ಪ್ರಧಾನವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಸನ್ಮಾನನೀಡಿ ಗೌರವಿಸಿರುವುದು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಿಂದ ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ ಸತತ 8ನೇ ಬಾರಿ "ಸಾಧನಾ ಪ್ರಶಸ್ತಿ"
ದಿನಾಂಕ:30-08-2025 ರಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ಮಹಾಸಭೆಯಂದು 2024-2025ನೇ ಸಾಲಿನಲ್ಲಿ ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಿದ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ಸಹಕಾರಿ ಸಂಸ್ಥೆ ಎಂದು ಗುರುತಿಸಿ "ಸಾಧನಾ ಪ್ರಶಸ್ತಿ" ಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯ ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಇವರಿಗೆ ನೀಡಿ ಗೌರವಿಸಿದರು.
ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಎ. ಆನಂದ ಆಚಾರ್ಯ, ನಿರ್ದೇಶಕರುಗಳಾದ ಶ್ರೀ ಕೆ.ಯಜ್ಞೇಶ್ವರ ಆಚಾರ್ಯ, ಶ್ರೀ ಕೆ.ಶಶಿಕಾಂತ್ ಆಚಾರ್ಯ, ಶ್ರೀ ಮಲ್ಲಪ್ಪ ಎನ್. ಪತ್ತಾರ್, ಶ್ರೀಮತಿ ರೋಹಿಣಿ ಎಂ.ಪಿ., ಶ್ರೀಮತಿ ಜ್ಯೋತಿ ಎಂ.ವಿ., ,ಶ್ರೀ ಕೆ. ಪ್ರಕಾಶ್ ಆಚಾರ್ಯ, ಶ್ರೀ ಮಂಜುನಾಥ ಆಚಾರ್ಯ ಮತ್ತು ಶ್ರೀ ಚಂದ್ರಶೇಖರ್ ಎ.ಎಸ್.ರವರು ಉಪಸ್ಥಿತರಿದ್ದರು.
ಪಂಚ ಕಸುಬುಗಳಲ್ಲಿ ಅಧ್ವಿತೀಯ ಸಾಧನೆ ಮಾಡಿದ ಐದು ಮಂದಿ ಶಿಲ್ಪಿಗಳಿಗೆ 2024-2025ರ ಸಾಲಿನ "ಎಸ್.ಕೆ.ಜಿ.ಐ.ಪಾಲ್ಕೆ - ಪ್ರಶಸ್ತಿ"
ದಿನಾಂಕ: 24-08-2025 ರಂದು ಜರಗಿದ ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ 2024-2025 ನೇ ಸಾಲಿನ 59 ನೇ ವಾರ್ಷಿಕ ಮಹಾಸಭೆಯಲ್ಲಿ ಪಂಚ ಕಸುಬುಗಳಲ್ಲಿ ಅಧ್ವಿತೀಯ ಸಾಧನೆಗೈದ ಐದು ಮಂದಿ ಶಿಲ್ಪಿಗಳಾದ 1) ಸ್ವರ್ಣಶಿಲ್ಪ- ಶ್ರೀ ಎನ್.ರಾಮಚಂದ್ರ ಆಚಾರ್ಯ, ಕಾರ್ಕಳ, 2) ಕಾಷ್ಠಶಿಲ್ಪ-ಶ್ರೀ ಬಳ್ಕೂರು ಗೋಪಾಲ ಆಚಾರ್ಯ, ಉಡುಪಿ 3) ಅಯಸ್ ಶಿಲ್ಪ- ಶ್ರೀಮತಿ ಲೀಲಾವತಿ ಆಚಾರ್ಯ, ಸುಳ್ಯ 4) ಎರಕ ಶಿಲ್ಪ- ಶ್ರೀ ಜಿ. ಹರಿಶ್ಚಂದ್ರ ಆಚಾರ್ಯ, ಬೆಳ್ತಂಗಡಿ 5) ಶಿಲಾ ಶಿಲ್ಪ-ಶ್ರೀ ಜನಾರ್ದನ ಆಚಾರ್ಯ, ಕಾರ್ಕಳ ಇವರಿಗೆ 2024-2025ರ ಸಾಲಿನ "ಎಸ್.ಕೆ.ಜಿ.ಐ.ಪಾಲ್ಕೆ - ಪ್ರಶಸ್ತಿ"ಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯ, ಉಪಾಧ್ಯಕ್ಷರಾದ ಶ್ರೀ ಎ. ಆನಂದ ಆಚಾರ್ಯ, ಪ್ರಧಾನವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ನೀಡಿ ಗೌರವಿಸಿರುವುದು.
ಎಸ್.ಕೆ.ಜಿ.ಐ.ಕೋ-ಆಪ್.ಸೊಸೈಟಿಯ ವಾರ್ಷಿಕ ಮಹಾಸಭೆ
ರೂ.6.09 ಕೋಟಿ ಲಾಭ
ವಜ್ರಮಹೋತ್ಸವ ವರ್ಷದ ಪ್ರಯುಕ್ತ ಸದಸ್ಯರಿಗೆ ಶೇ.20 ಡಿವಿಡೆಂಡು ಘೋಷಣೆ
2024-2025ನೇ ಸಾಲಿನ ಮಹಾಸಭೆಯಲ್ಲಿ
ಎಸ್.ಕೆ.ಜಿ.ಐ.-ಪಾಲ್ಕೆ ಪ್ರಶಸ್ತಿ ಪ್ರದಾನ, ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ
ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ 2024-2025 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ:24-08-2025 ರಂದು ಶ್ರೀ ಪಿ. ಉಪೇಂದ್ರ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ, "ಡಾ| ಬಿ.ಆರ್. ಅಂಬೇಡ್ಕರ್ ಭವನ", ಉರ್ವಸ್ಟೋರ್, ಮಂಗಳೂರು ಇದರ ಸಭಾಭವನದಲ್ಲಿ ಜರಗಿತು.
ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಇವರು 2024-2025ರ ಸಾಲಿನ ವಾರ್ಷಿಕ ವರದಿ, ಲೆಕ್ಕಪರಿಶೋಧಿತ ಆಥಿರ್üಕ ತ:ಖ್ತೆಗಳು, ಅನುಪಾಲನಾ ವರದಿ, ಲಾಭಾಂಶದ ವಿಂಗಡಣೆ, ಬಜೆಟಿಗಿಂತ ಹೆಚ್ಚಾಗಿ ಖರ್ಚಾಗಿರುವುದನ್ನು, 2025-2026ನೇ ಸಾಲಿನ ಆಯ-ವ್ಯಯ ಪಟ್ಟಿಯನ್ನು ಹಾಗೂ ಕಾರ್ಯ ಚಟುವಟಿಕೆಗಳನ್ನು ಸಭೆಯಲ್ಲಿ ಮಂಡಿಸಿ, ಸದಸ್ಯರ ಸರ್ವಾನುಮತದ ಅನುಮೋದನೆ ಪಡೆದುಕೊಳ್ಳಲಾಯಿತು.
ವಜ್ರಮಹೋತ್ಸವ ವರ್ಷದ ಪ್ರಯುಕ್ತ 2024-2025ರ ಸಾಲಿಗೆ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡು ಪಾವತಿಗೆ ಮಂಜೂರಾತಿ ಪಡೆಯಲಾಯಿತು.
ಪಂಚಕಸುಬುಗಳಲ್ಲಿ ಸಾಧನೆಗೈದ ಐದು ಮಂದಿ ಶಿಲ್ಪಿಗಳಾದ ಸ್ವರ್ಣಶಿಲ್ಪ- ಶ್ರೀ ಎನ್. ರಾಮಚಂದ್ರ ಆಚಾರ್ಯ- ನಿಟ್ಟೆ, ಕಾಷ್ಠಶಿಲ್ಪ- ಶ್ರೀ ಬಳ್ಕೂರು ಗೋಪಾಲ ಆಚಾರ್ಯ- ಮಣಿಪಾಲ, ಎರಕ ಶಿಲ್ಪ-ಶ್ರೀ ಜಿ. ಹರಿಶ್ಚಂದ್ರ ಆಚಾರ್ಯ- ಕೊಕ್ರಾಡಿ, ಬೆಳ್ತಂಗಡಿ, ಅಯಸ್ ಶಿಲ್ಪ- ಶ್ರೀಮತಿ ಲೀಲಾವತಿ ಆಚಾರ್ಯ-ಗುತ್ತಿಗಾರ್, ಸುಳ್ಯ, ಶಿಲಾ ಶಿಲ್ಪ- ಶ್ರೀ ಜನಾರ್ದನ ಆಚಾರ್ಯ- ಅತ್ತೂರು ಇವರಿಗೆ 2024-2025ರ ಸಾಲಿನ ಎಸ್.ಕೆ.ಜಿ.ಐ.ಪಾಲ್ಕೆ - ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ವೇದಮೂರ್ತಿ ಬ್ರಹ್ಮಶ್ರೀ ಕೆ. ಉಮೇಶ್ ತಂತ್ರಿ- ವೈದಿಕ ಕ್ಷೇತ್ರ, ಶ್ರೀ ಯಶವಂತ ಎಮ್.ಜಿ- ಸಂಗೀತ ಕ್ಷೇತ್ರ, ಶ್ರೀ ಎನ್. ಆರ್. ದಾಮೋದರ ಶರ್ಮಾ-ವಾಗ್ಮಿ, ಶ್ರೀ ಕೆ.ಜೆ. ಗಣೇಶ್ ಆಚಾರ್ಯ -ಯಕ್ಷಗಾನ ಕ್ಷೇತ್ರ, ಶ್ರೀ ಎ.ಜಿ. ಸದಾಶಿವ ಮಂಗಳಾದೇವಿ-ಕಲಾ ಕ್ಷೇತ್ರ, ಶ್ರೀ ಕೆ. ಲಕ್ಷ್ಮೀನಾರಾಯಣ -ಚಿತ್ರಕಲಾ ಕ್ಷೇತ್ರ ಇವರಿಗೆ ಗೌರವ ಸನ್ಮಾನ ನೀಡಿ ಅಭಿನಂದಿಸಲಾಯಿತು.
ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ದೇವ ಮಾನವ ಪಾಲ್ಕೆ ಬಾಬುರಾಯ ಆಚಾರ್ಯ ಕಲಾಕೃತಿಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ರಚಿಸಿಕೊಟ್ಟ ಶ್ರೀ ಮಧುಸೂದನ ಆಚಾರ್ಯ, ಪಡುಬಿದ್ರಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
2024-2025 ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ಶಾಖೆಗಳನ್ನು ಎರಡು ವರ್ಗಗಳನ್ನಾಗಿ ವಿಂಗಡಿಸಿ ಒಂದನೇ ವರ್ಗದಲ್ಲಿ ಪ್ರಥಮ ಸ್ಥಾನ ಕೋಟೇಶ್ವರ ಶಾಖೆ ಮತ್ತು ದ್ವಿತೀಯ ಸ್ಥಾನ ಉಡುಪಿ ಶಾಖೆಗೆ ನೀಡಲಾಯಿತು.ಎರಡನೇ ವರ್ಗದಲ್ಲಿ ಸಂತೆಕಟ್ಟೆ-ಕಲ್ಯಾಣ್‍ಪುರ ಶಾಖೆ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಶಿರ್ವ-ಮಂಚಕಲ್ ಶಾಖೆಗೆ ನೀಡಲಾಯಿತು.
2024-2025ನೇ ಸಾಲಿನಲ್ಲಿ ರೂ.6,09,42,839.61/- ನಿವ್ವಳ ಲಾಭಗಳಿಸಿದ್ದು, ರೂ.25,386.20 ಲಕ್ಷ ಠೇವಣಿ ಇದ್ದು, ರೂ.24031.98 ಲಕ್ಷ ಸದಸ್ಯರ ಸಾಲ ಹೊರಬಾಕಿ ಇದ್ದು, ಒಟ್ಟು ವ್ಯವಹಾರವು ರೂ.1293.16 ಕೋಟಿ ನಡೆÉಸಿದ್ದು, ಸೊಸೈಟಿಯ ದುಡಿಯುವ ಬಂಡವಾಳ ರೂ.28799.55 ಲಕ್ಷ ಇರುತ್ತದೆ. ಸೊಸೈಟಿಯ ಆಪದ್ಧನ ನಿಧಿ ರೂ.1156.21 ಲಕ್ಷ, ಕಟ್ಟಡ ನಿಧಿ ರೂ.361.92 ಲಕ್ಷ ಇರುತ್ತದೆ. ದ.ಕನ್ನಡ, ಉಡುಪಿ ಜಿಲ್ಲೆಯಾದ್ಯಂತ 18 ಬ್ಯಾಂಕಿಂಗ್ ಹಾಗೂ 1 ಕೈಗಾರಿಕಾ ಶಾಖೆ, ಆಡಳಿತ ಕಛೇರಿ, ಹಾಗೂ ಉಳಿದ 6 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿ, ಸದಸ್ಯರ ಬೇಡಿಕೆಗೆ ಸ್ಪಂದಿಸಿ ವ್ಯವಹಾರ ನಡೆಸುತ್ತಿದೆ. ಠೇವಣಿದಾರರಿಗೆ ಆಕರ್ಷಕ ಬಡ್ಡಿದರ ನೀಡುತ್ತಾ, ಸದಸ್ಯರಿಗೆ ಶೇ.20% ರಷ್ಟು ಡಿವಿಡೆಂಡು ಘೋಷಣೆ ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆಗೈಯುತ್ತಾ ಸದಸ್ಯರಿಗೆ ಕಳೆದ 35 ವರ್ಷ ದಿಂದ ಡಿವಿಡೆಂಡು ನೀಡುತ್ತಾ, ಸದಸ್ಯರ ವಿಶ್ವಾಸಕ್ಕೆ ಪಾತ್ರವಾಗಿದೆ. ಅಧ್ಯಕ್ಷರಾದ ಶ್ರೀ ಪಿ.ಉಪೇಂದ್ರ ಆಚಾರ್ಯ ರವರು ಮಾತನಾಡಿ ನಮ್ಮ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಎಲ್ಲರ ಹೃದಯ ತಟ್ಟಿದಲ್ಲಿ ಅದೇ ಸಂತೃಪ್ತಿ ಎಂದರು ಹಾಗೂ ಸೊಸೈಟಿಯ ಬೆಳವಣಿಗೆಗಾಗಿ ಸಹಕರಿಸಿ-ಪೆÇ್ರೀತ್ಸಾಹಿಸಿದ ಎಲ್ಲಾ ನಿರ್ದೇಶಕರನ್ನು, ಸದಸ್ಯರನ್ನು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.
ಸನ್ಮಾನಿತರಲ್ಲಿ ಶ್ರೀ ಯಶವಂತ ಎಂ.ಜಿ ಮಾತನಾಡಿ ಸಾಧಕರನ್ನು ಸನ್ಮಾನಿಸುತ್ತಿರುವುದು ಆರಾಧ್ಯ ದೇವತೆ ಸರಸ್ವತಿಗೆ ಗೌರವ ಸಲ್ಲಿಸಿದಂತೆ ಎಂದ ನುಡಿದು ಇದರೊಂದಿಗೆ ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರ ಹಾಡನ್ನು ಹಾಡಿ ಸಭಿಕರನ್ನು ರಂಜಿಸಿದರು. ಶ್ರೀ ಎನ್ ಆರ್ ದಾಮೋದರ್ ಶರ್ಮಾರು ತಮ್ಮ ಮಾತಿನಲ್ಲಿ ಸಂಸ್ಥೆಯನ್ನು ಹುಟ್ಟಿ ಹಾಕಿದ ಪಾಲ್ಕೆ ಬಾಬುರಾಯ ಆಚಾರ್ಯನ್ನು ಹಾಡಿ ಹೊಗಳಿದರು. ಸಜ್ಜನರ ಸಮ್ಮುಖದಲ್ಲಿ ಸನ್ಮಾನ ದೊರೆತಿರುವುದು ನನ್ನ ಸೌಭಾಗ್ಯ. ನಾನು ಸಣ್ಣವನು ಎದುರು ಇರುವವನು ನನಗಿಂತ ತುಂಬಾ ಎತ್ತರದಲ್ಲಿರುವವ ಎಂದು ಭಾವಿಸಿದಲ್ಲಿ ಮಾತ್ರ ನಾವು ಬೆಳೆಯಲು ಸಾಧ್ಯ ಎಂದರು.
ಶ್ರೀ ಕೆ.ಜೆ ಗಣೇಶ ಆಚಾರ್ಯರು ಯಕ್ಷಗಾನ ಹಾಡನ್ನು ಹಾಡುವುದರೊಂದಿಗೆ ನನ್ನನ್ನು ಸನ್ಮಾನಿಸಿರುವುದು ಯಕ್ಷಗಾನಕ್ಕೆ ಸಂದ ಗೌರವ ಎಂದರು. ಶ್ರೀ ಬಳ್ಕೂರು ಗೋಪಾಲ ಆಚಾರ್ಯರು ಸಂಸ್ಥೆಯ ಕಾರ್ಯವೈಖರಿ ಹಾಗೂ ಸಂಸ್ಥೆಯ ಯಶಸ್ಸನ್ನು ಶ್ಲಾಘಿಸಿದರು.
ಶ್ರೀ ಲಕ್ಷ್ಮೀನಾರಾಯಣ ಕೆ ಇವರು ಮಾತನಾಡಿ ನಮ್ಮನ್ನು ಗುರುತಿಸಿ ಗೌರವಿಸುವುದೇ ನಮ್ಮ ಕೆಲಸಕ್ಕೆ ಪ್ರಮಾಣವಾಗಿರುತ್ತದೆಂದರು. ಸಭಿಕರಲ್ಲಿ ಶ್ರೀ ಎನ್. ಯೋಗೀಶ್ ಆಚಾರ್ಯ ಸಲಹೆಗಳನ್ನು ನೀಡಿದರು. ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯರು ಅಧ್ಯಕ್ಷೀಯ ನುಡಿಗಳನ್ನಾಡಿ ಸಂಸ್ಥೆಯ ಮೇಲೆ ಅಭಿಮಾನ ವಿಶ್ವಾಸ ಇಟ್ಟಿರುವ ಸದಸ್ಯ ಗ್ರಾಹಕರು ಹಾಗೂ ಸಿಬ್ಬಂದಿಗಳ ಪರಿಶ್ರಮದಿಂದ ಸಂಸ್ಥೆಯು ಇಷ್ಟು ಎತ್ತರಕ್ಕೆ ಬೆಳೆದಿದೆ ಪಾಲ್ಕೆ ಬಾಬುರಾಯ ಆಚಾರ್ಯರು ತೊಡಗಿಸಿಕೊಂಡ ರೀತಿ ಹಾಗೂ ಪ್ರೇರಣೆಯಿಂದ ಕಾರ್ಯನಿರತರಾದವರಿಗೆ ಇಂದು ಪ್ರಶಸ್ತಿಗಳು ಲಭಿಸಿರುತ್ತದೆ, ಎಲ್ಲರಿಗೂ ಶುಭವಾಗಲಿ ಎಂದರು.
ಪುರೋಹಿತ್ ವೈ.ವಿ.ವಿಶ್ವಜ್ಞಮೂರ್ತಿ ಇವರು ಪ್ರಾರ್ಥನೆ ಗೈದು, ಉಪಾಧ್ಯಕ್ಷರಾದ ಶ್ರೀ ಎ. ಆನಂದ ಆಚಾರ್ಯರು ಸ್ವಾಗತಿಸಿದರು. ಶ್ರೀಮತಿ ಉಷಾ ಮನೋಜ್ ಹಾಗೂ ಶ್ರೀಕಾಂತ ಕಾರ್ಯಕ್ರಮದ ನಿರೂಪಣೆ ಗೈದರು.
ಉಪಾಧ್ಯಕ್ಷರಾದ ಶ್ರೀ ಎ. ಆನಂದ ಆಚಾರ್ಯ ಹಾಗೂ ನಿರ್ದೇಶಕರಾದ ಶ್ರೀ ಕೆ.ಯಜ್ಞೇಶ್ವರ ಆಚಾರ್ಯ, ಶ್ರೀ ವೈ.ವಿ.ವಿಶ್ವಜ್ಞಮೂರ್ತಿ, ಶ್ರೀ ವಿ.ಜಯ ಆಚಾರ್ಯ, ಶ್ರೀ ಕೆ. ಶಶಿಕಾಂತ್ ಆಚಾರ್ಯರು, ಶ್ರೀ ಮಲ್ಲಪ್ಪ ಎನ್ ಪತ್ತಾರ್, ಶ್ರೀಮತಿ ರೋಹಿಣಿ ಎಂ.ಪಿ., ಶ್ರೀಮತಿ ಜ್ಯೋತಿ ಎಂ.ವಿ., ಶ್ರೀ ರಮೇಶ್ ರಾವ್ ಯು. ಶ್ರೀ ಪ್ರಕಾಶ್ ಆಚಾರ್ಯ ಕೆ., ಶ್ರೀ ಮಂಜುನಾಥ ಆಚಾರ್ಯ ಮತ್ತು ಶ್ರೀ ಚಂದ್ರಶೇಖರ ಎ.ಎಸ್. ಉಪಸ್ಥಿತರಿದ್ದರು. ನಿರ್ದೇಶಕರಾದ ಶ್ರೀ ಪ್ರಕಾಶ್ ಆಚಾರ್ಯ ಕೆ., ರವರ ವಂದನಾರ್ಪಣೆಯೊಂದಿಗೆ ವಾರ್ಷಿಕ ಮಹಾಸಭೆಯು ಮುಕ್ತಾಯವಾಯಿತು.
ಎಸ್.ಕೆ ಗೋಲ್ಡ್‌ಸ್ಮಿತ್ಸ್ ಸೊಸೈಟಿಯಿಂದ ಬಡ ದಂಪತಿಗೆ ಮನೆ ಕೊಡುಗೆ
ಸಂಸ್ಥೆಯ ವಜ್ರಮಹೋತ್ಸವ ಆಚರಣೆಯ 2ನೇ ಮನೆ ಉಡುಪಿ ಜಿಲ್ಲೆಯ ಬೂದಾಡಿಯಲ್ಲಿ ನಿರ್ಮಾಣ.
ಮಂಗಳೂರು: ಠೇವಣಿ ಸಂಗ್ರಹಣೆ, ಸಾಲ ವಿತರಣೆ, ವಿದ್ಯಾರ್ಥಿ ವೇತನ ನೀಡುವಿಕೆ, ಆರೋಗ್ಯ ತಪಾಸಣೆ, ವನಮಹೋತ್ಸವ, ಪುಸ್ತಕ ವಿತರಣೆ, ರಕ್ತದಾನ ಶಿಬಿರಗಳಂತಹ ಆರ್ಥಿಕ ಚಟುವಟಿಕೆಗಳಲ್ಲೇ ನಿರತರಾಗಿರುವ ಕೋ-ಆಪರೇಟಿವ್ ಸೊಸೈಟಿಗಳು ಕೂಡ ತಮ್ಮ ವಿಶೇಷ ಕಾರ್ಯಕ್ರಮಗಳಿಗೆ ಮಾನವೀಯ ಸ್ಪರ್ಶ ಹೇಗೆ ಕೊಡಬಲ್ಲವು ಎಂಬುದಕ್ಕೆ ಮಂಗಳೂರಿನ ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಮತ್ತೊಮ್ಮೆ ನಿದರ್ಶನ ಕೊಟ್ಟಿದೆ. ವಿಭಿನ್ನ ಯೋಚನೆ, ಯೋಜನೆಗಳನ್ನು ಕಾರ್ಯಗತಗೊಳಿಸಿದರೆ ಜನರು ಗುರುತಿಸುವ ಕೆಲಸ ಮಾಡಬಹುದು ಎಂಬುದನ್ನು ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಸಾಧಿಸಿ ತೋರಿಸಿದ್ದು, ತಮ್ಮ ಸಂಸ್ಥೆಯ ವಜ್ರ ಮಹೋತ್ಸವ ಆಚರಣೆಯ ಶುಭ ಸಂದರ್ಭದಲ್ಲಿ ಬಡ ದಂಪತಿಗೆ ಉಡುಪಿ ಜಿಲ್ಲೆಯ ಬಿಲ್ಲಾಡಿ ಗ್ರಾಮದ ಬೂದಾಡಿಯಲ್ಲಿ ಹೊಸ ಮನೆ ನಿರ್ಮಾಣ ಮಾಡಿರುತ್ತಾರೆ.
ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯು ಕ್ರಿಯಾಶೀಲ ವ್ಯವಸ್ಥಾಪನೆ, ದಕ್ಷ ಆಡಳಿತ ನಿರ್ವಹಣೆಯಿಂದ ಹೆಸರು ವಾಸಿಯಾಗಿದೆ. ಸಂಸ್ಥೆಯ ವಜ್ರಮಹೋತ್ಸವ ಆಚರಣೆಯ ಅಂಗವಾಗಿ ಹಮ್ಮಿಕೊಂಡ ಗೃಹನಿರ್ಮಾಣ ಯೋಜನೆಯಡಿಯಲ್ಲಿ ಶ್ರೀಮತಿ ಲಲಿತಾ ಮತ್ತು ಶ್ರೀ ಗಣೇಶ ಆಚಾರ್ಯ ದಂಪತಿಗಳ ಮನೆಗೆ ತೆರಳಿ ಪರಿಶೀಲಿಸಿದಾಗ ಮನೆ ಪೂರ್ತಿ ಬೀಳುವ ಸ್ಥಿತಿಯಲ್ಲಿದ್ದು, ತೀರಾ ಸಂಕಷ್ಟದಲ್ಲಿರುವಂತಿತ್ತು. ದುಡಿಯುವ ಗಂಡು ಜೀವ ಪಾರ್ಶ್ವವಾಯುವಿನಿಂದ ಮಾತು ಕಳೆದುಕೊಂಡು, ದುಡಿಯಲೂ ಆಗದೆ, ಸಂತಾನವೂ ಇಲ್ಲದೆ ಕೇವಲ ಪತ್ನಿಯ ಸಣ್ಣ ಪುಟ್ಟ ಕೆಲಸದಿಂದ ಜೀವನ ಸಾಗಿಸುತ್ತಿದೆ. ಮನೆಗೆ ತೆರಳಿದಾಗ ಮನೆ ಸೋರುತ್ತಿದ್ದು, ಹಂಚಿನ ಮನೆಯ ಪಕ್ಕಾಸು ತುಂಡಾಗಿ, ಸಿಮೆಂಟ್ ಶೀಟ್ ಒಡೆದು ನೀರು ಒಳಗೆ ಬೀಳುತ್ತಿತ್ತು. ಮನೆಯ ಒಳಗೆ ಕುಳಿತುಕೊಳ್ಳುವುದೂ ಕಷ್ಟವಾಗುತ್ತಿತ್ತು. ಇಂತಹ ಕಷ್ಟದ ಸಂದರ್ಭದಲ್ಲೇ ಆ ಮನೆಯ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡ ಎಸ್.ಕೆ ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಮುತುವರ್ಜಿ ವಹಿಸಿಕೊಂಡು ಕೆಲಸ ನಿರ್ವಹಿಸಿತು. ರೂ.7,60,000/- ವೆಚ್ಚದಲ್ಲಿ ಸುಸಜ್ಜಿತ ಮನೆಯ ನಿರ್ಮಾಣವಾಗಿದ್ದು ಜುಲೈ 6 ರಂದು ಭಾನುವಾರ ಬೆಳಗ್ಗೆ 11.00ಕ್ಕೆ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಲಿದ್ದು, ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ - ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಶ್ರೀ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷತೆಯಲ್ಲಿ, ಮಾನ್ಯ ಸಂಸದರು ಶ್ರೀ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಶ್ರೀ ಧನಂಜಯ ಶೆಟ್ಟಿ, ಆಡಳಿತ ಮೊಕ್ತೇಸರರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಶ್ರೀ ಕಿರಣ್ ಕುಮಾರ್ ಕೊಡ್ಗಿ, ಮಾನ್ಯ ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ ಹಾಗೂ ಶ್ರೀಮತಿ ಜ್ಯೋತಿ ಕೆ.ಸಿ, ವಲಯ ಅರಣ್ಯಾಧಿಕಾರಿ, ಶಂಕರನಾರಾಯಣ ಇವರು ಸಸಿ ವಿತರಣೆ ಮಾಡಲಿದ್ದಾರೆ. ಶ್ರೀ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು ಕರ್ನಾಟಕ ಸರಕಾರ, ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ-ಅಧ್ಯಕ್ಷರು, ಉಡುಪಿ ಜಿಲ್ಲಾ ಸಹಕಾರಿ ಯಾನಿಯನ್, ಶ್ರೀ ಶ್ರೀಧರ ಆಚಾರ್ ವಡೇರಹೋಬಳಿ, ಆಡಳಿತ ಮೊಕ್ತೇಸರರು, ಶ್ರೀ ಕಾಳಿಕಾಂಬಾ ದೇವಸ್ಥಾನ, ಬಾರ್ಕೂರು, ಶ್ರೀ ದಿನೇಶ್ ಹೆಗ್ಡೆ ಮೊಳಹಳ್ಳಿ, ಕಾಂಗ್ರೆಸ್ ಮುಖಂಡರು ಮತ್ತು ಉದ್ಯಮಿ, ಶ್ರೀಮತಿ ಸರಸ್ವತಿ ಬಾೈ ವಂಡಾರು, ಅಧ್ಯಕ್ಷರು ಬಿಲ್ಲಾಡಿ ಗ್ರಾಮ ಪಂಚಾಯತ್ ಹಾಗೂ ರಥಶಿಲ್ಪಿ ಶ್ರೀ ರಾಜಗೋಪಾಲ ಆಚಾರ್ಯ, ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ, ಕುಂಭಾಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷ ಎ.ಆನಂದ ಆಚಾರ್ಯ, ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ, ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ ವಿಶ್ವಜ್ಞಮೂರ್ತಿ, ವಿ.ಜಯ ಆಚಾರ್, ಕೆ.ಶಶಿಕಾಂತ ಆಚಾರ್ಯ, ಮಲ್ಲಪ್ಪ ಎನ್.ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ, ರಮೇಶ್ ರಾವ್ ಯು., ಕೆ.ಪ್ರಕಾಶ್ ಆಚಾರ್ಯ, ಮಂಜುನಾಥ ಆಚಾರ್ಯ, ಚಂದ್ರಶೇಖರ್ ಎ.ಎಸ್ ಪಾಲ್ಗೊಳ್ಳಲಿದ್ದಾರೆ.
ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., : 6.09 ಕೋಟಿ ರೂ ಲಾಭ
1964ರಲ್ಲಿ ದೇವಮಾನವ ದಿ| ಪಾಲ್ಕೆ ಬಾಬುರಾಯ ಆಚಾರ್ಯರ ಮುಂದಾಳುತ್ವದಲ್ಲಿ ಸ್ಥಾಪನೆಗೊಂಡು ವಜ್ರಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು 2024-25ನೇ ಸಾಲಿನಲ್ಲಿ 1292.45 ಕೋಟಿ ರೂ ವ್ಯವಹಾರ ನಡೆಸಿ 6.09 ಕೋಟಿ ರೂ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ತಿಳಿಸಿದ್ದಾರೆ. ಒಟ್ಟು 22848 ಸದಸ್ಯ ರಿಂದ 7.03 ಕೋಟಿ ರೂ ಪಾಲು ಬಂಡವಾಳ ಹೊಂದಿರುತ್ತದೆ. ಒಟ್ಟು ಠೇವಣಿ 253.86 ಕೋಟಿ ರೂ ಇದ್ದು, ಸದಸ್ಯ/ಗ್ರಾಹಕರಿಗೆ ಚಿನ್ನಾಭರಣ ಸಾಲ, ಜಾಮೀನು ಸಾಲ, ವಾಹನ ಖರೀದಿ ಸಾಲ, ಆಸ್ತಿ ಅಡವು / ಗೃಹ ನಿರ್ಮಾಣ ಸಾಲ, ಯಂತ್ರೋಪಕರಣ ಸಾಲ, ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ, ಹಾಗೂ ನಿಬಡ್ಡಿಯಲ್ಲಿ ಸೋಲಾರ್ ಯಂತ್ರೋಪಕರಣ ಸಾಲ ನೀಡುತ್ತಿದ್ದು ವರ್ಷಂತ್ಯಕ್ಕೆ ರೂ 240.32 ಕೋಟಿ ಹೊರಬಾಕಿ ಸಾಲ ಇದ್ದು ಡಿಮಾಂಡ್ ಮೇಲೆ ಸುಸ್ತಿಬಾಕಿ ಪ್ರಮಾಣ ಶೇ.2.76 ಆಗಿರುತ್ತದೆ. ಕಳೆದ ಸಾಲಿನಲ್ಲಿ ಸುಸ್ತಿ ಬಾಕಿ ಶೇ 3.77 ಇದ್ದು 1.01 ಶೇ ಕಡಿಮೆಯಾಗಿರುತ್ತದೆ. ಸಂಸ್ಥೆಯು 26.22 ಕೋಟಿ ನಿಧಿ, 288.03 ಕೋಟಿ ರೂ ದುಡಿಯುವ ಬಂಡವಾಳದೊಂದಿಗೆ 51.49 ಕೋಟಿ ರೂ ಧನವಿನಿಯೋಗಗಳನ್ನು ಹೊಂದಿರುತ್ತದೆ, 01 ಕೈಗಾರಿಕಾ ಶಾಖೆ ಹೊಂದಿದ್ದು 17 ಬ್ಯಾಂಕಿಂಗ್ ಶಾಖೆಗಳನ್ನು ಹೊಂದಿದೆ, ಆಡಳಿತ ಕಛೇರಿ ಸಹಿತ 6 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.
ವಜ್ರ ಮಹೋತ್ಸವದ ಪ್ರಯುಕ್ತ 60 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದು 51 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿವೆ. ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ, ವೈದ್ಯಕೀಯ ಶಿಬಿರ, ವನಮಹೋತ್ಸವ, ಸದಸ್ಯರಿಗೆ ಕ್ರೀಡಾಕೂಟ, ಸಾರ್ವಜನಿಕರ ಉಪಯೋಗಕ್ಕೆ ಪ್ಯೂರಿಫೈಡ್ ಕುಡಿಯುವ ನೀರಿನ ವ್ಯವಸ್ಥೆ, ಅನುದಾನಿತ ಶಾಲೆಗಳಿಗೆ ಅಗತ್ಯ ವಸ್ತುಗಳ ಪೂರೈಕೆ, ನಿರಾಶ್ರಿತರಿಗೆ ಮತ್ತು ಹಿರಿಯರ ಮನೆ ಅರೈಕೆ ಮಾಡುವ ಸಂಸ್ಥೆಗಳಿಗೆ ಆರ್ಥಿಕ ಸಹಕಾರ ಸೌಲಭ್ಯ, ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತೀರಾ ಬಡಕುಟುಂಬಕ್ಕೆ ಮನೆ ಹಸ್ತಾಂತರ ಮುಂತಾದ ಕಾರ್ಯಕ್ರಮಗಳು ಜರಗಿರುತ್ತದೆ.
ಪ್ರಸ್ತುತ ಆಡಳಿತ ಕಛೇರಿ ಹಾಗೂ ಕೊಟ್ಟಾರಚೌಕಿ ಶಾಖೆಯ ನವೀಕರಣ ಕಾರ್ಯವು ಪ್ರಗತಿಯಲ್ಲಿ ನಡೆಯುತ್ತಿದೆ. ಸಂಸ್ಥೆಯ ಪ್ರಗತಿಗೆ ಪೂರಕವೆಂಬಂತೆ 2 ಬಾರಿ ರಾಜ್ಯದ ಉತ್ತಮ ಸಹಕಾರ ಸಂಘ ಪ್ರಶಸ್ತಿ, 2 ಬಾರಿ ಜಿಲ್ಲೆಯ ಉತ್ತಮ ಸಹಕಾರಿ ಸಂಘ ಪ್ರಶಸ್ತಿ, 2 ಬಾರಿ ರಾಜ್ಯದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ, 7 ಬಾರಿ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ "ಸಾಧನಾ ಪ್ರಶಸ್ತಿ", 2023 ಮತ್ತು 2024ರಲ್ಲಿ 2 ಬಾರಿ ಸಹಕಾರಿ ಸಪ್ತಾಹದ ಮೂಲಕ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಪಡೆದ ಹೆಗ್ಗಳಿಗೆ ನಮ್ಮ ಸಂಸ್ಥೆಯದಾಗಿರುತ್ತದೆ.
"ಪರಸ್ಪರ ಸಹಕಾರ ಸಹಬಾಳ್ವೆಯಿಂದಲೇ ಸಮಾಜದ ಪ್ರಗತಿ" ಎಂಬ ಧ್ಯೇಯದೊಂದಿಗೆ ಸಂಸ್ಥೆಯ ಅಭಿವೃದ್ಧಿ ಪಥದಲ್ಲಿ ಸದಾ ಜೊತೆಗಿರುವ ಸಂಸ್ಥೆಯ ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿಯವರು ಹಾಗೂ ಸದಸ್ಯ/ಗ್ರಾಹಕರಿಗೆ ಸಂಸ್ಥೆಯ ಅಧ್ಯಕ್ಷನಾಗಿ ತುಂಬು ಹೃದಯದ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶ್ರೀ ಪಿ.ಉಪೇಂದ್ರ ಆಚಾರ್ಯ
ಅಧ್ಯಕ್ಷರು
ವಜ್ರಮಹೋತ್ಸವ ವರ್ಷ ಆಚರಿಸುತ್ತಿರುವ ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇವರಿಂದ ಉಲ್ಲಂಜೆಯಲ್ಲಿ ಮನೆ ಹಸ್ತಾಂತರ ಕಾರ್ಯಕ್ರಮ
ತಾನು ಬದುಕುವುದರೊಂದಿಗೆ ಮತ್ತೊಬ್ಬರಿಗೆ ಬದುಕು ಕಲ್ಪಿಸುವ ವ್ಯವಸ್ಥೆ ಸಮಾಜದಲ್ಲಿ ಇರಬೇಕು, ಈ ಬ್ಯಾಂಕ್ ಕೇವಲ ವ್ಯಾವಹಾರಿಕ ಕ್ಷೇತ್ರವಾಗಿರದೆ ಸಾಮಾಜಿಕ ಕಾರ್ಯದಲ್ಲಿ ತೊಡಗಿ, ಬಡ ಕುಟುಂಬಕ್ಕೆ ಬದುಕು ಕಲ್ಪಿಸಿ ಕೊಟ್ಟು ಸಾರ್ಥಕತೆ ಪಡೆದಿದೆ ಎಂದು ಕಟೀಲು ದೇಗುಲದ ಪ್ರಧಾನ ಆರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಅವರು ರವಿವಾರ ಕಿನ್ನಿಗೋಳಿಯ ಉಲ್ಲಂಜೆಯ ಶ್ರೀಮತಿ ವೀಣಾ ಆಚಾರ್ಯ ಅವರಿಗೆ ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವದ ಪ್ರಯುಕ್ತ ಗೃಹ ನಿರ್ಮಾಣ ಯೋಜನೆಯಡಿಯಲ್ಲಿ ನೂತನ ಮನೆ ಹಸ್ತಾಂತರಿಸಿ ಶುಭ ಹಾರೈಸಿ ಮಾತನಾಡಿದರು. ಉದ್ಘಾಟನೆಗೈದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಪಾಲ್ಕೆ ಬಾಬುರಾಯ ಆಚಾರ್ಯ ಅವರು ಅಂದು ಬ್ಯಾಂಕ್ ಸ್ಥಾಪಿಸಿ ದೊಡ್ಡ ಸಾಧನೆ ಮಾಡಿದ್ದು ಇಂದು ಪ್ರತಿಷ್ಠಿತ ಬ್ಯಾಂಕ್ ಆಗಿ ಮುಂದುವರಿಯುತ್ತಿದೆ ಎಂದು ಹೇಳಿದರು. ತನ್ನದೇ ಸೂರು ಬೇಕೆನ್ನುವ ಕನಸನ್ನು ಹೊತ್ತ ಬಡ ಕುಟುಂಬಕ್ಕೆ ಈ ಸಂಸ್ಥೆ ಆಸರೆಯಾಗಿ ಅದನ್ನು ನನಸಾಗಿಸಿದೆ ಎಂದರು. ಯುಗಪುರುಷದ ಸಂಪಾದಕ ಕೆ ಭುವನಾಭಿರಾಮ ಉಡುಪ ಮಾತನಾಡಿ ಸಾರ್ವಜನಿಕವಾಗಿ ಪುಣ್ಯದ ಕೆಲಸವನ್ನು ಈ ಸಂಸ್ಥೆಯು ಮಾಡಿದ್ದು ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ ಎಂದರು. ಸೊಸೈಟಿಯ ಅಧಕ್ಷ ಪಿ ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯು ಜನಪರ ಕಾಳಜಿಯ ದೃಷ್ಟಿಯಿಂದ ವಜ್ರಮಹೋತ್ಸವದ ಪ್ರಯುಕ್ತ 60 ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದು 51ನೇ ಕಾರ್ಯಕ್ರಮವಾಗಿದ್ದು ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲೂ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಮನೆ ಹಸ್ತಾಂತರ ವೆಂಬ ಪುಣ್ಯ ಕಾರ್ಯದ ಶ್ರೇಯಸ್ಸು ಕೇವಲ ಸಂಸ್ಥೆ ಹಾಗೂ ಸಿಬ್ಬಂದಿಗಳಲ್ಲದೆ ಸದಸ್ಯ ಮತ್ತು ಗ್ರಾಹಕರಿಗೂ ಸಲ್ಲುತ್ತದೆ ಎಂದರು. ಇಂತಹ ಸೇವೆಯನ್ನು ಪ್ರತೀ ವರ್ಷ ಮಾಡುವ ಭಾಗ್ಯ ಆ ಭಗವಂತ ಕರುಣಿಸಲಿ ಎಂದರು. ನಿರ್ದೇಶಕರಾದ ಮಂಜುನಾಥ ಆಚಾರ್ಯರ ವಾಸ್ತು ನಿರ್ದೇಶನದಂತೆ ಮನೆ ನಿರ್ಮಾಣ ಮಾಡಲಾಗಿದೆ. ಸಂಸ್ಥೆಯ ನಿರ್ದೇಶಕರಾದ ವೈ ವಿ ವಿಶ್ವಜ್ಞಮೂರ್ತಿ ಪ್ರಾರ್ಥನೆಗೈದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಆಚಾರ್ಯ ಸುರಗಿರಿ, ಸಂಸ್ಥೆಯ ನಿರ್ದೇಶಕರಾದ ವಿ. ಜಯ ಆಚಾರ್, ಕೆ ಯಜ್ಞೇಶ್ವರ ಆಚಾರ್ಯ, ಕೆ ಶಶಿಕಾಂತ ಆಚಾರ್ಯ, ಶ್ರೀಮತಿ ರೋಹಿಣೆ ಎಮ್ ಪಿ, ರಮೇಶ್ ರಾವ್ ಯು, ಕೆ ಪ್ರಕಾಶ್ ಆಚಾರ್ಯ, ಮಂಜುನಾಥ ಆಚಾರ್ಯ, ಕಿನ್ನಿಗೋಳಿ ಶಾಖಾ ವ್ಯವಸ್ಥಾಪಕಿ ವನಮಾಲಾ ಯು ಆಚಾರ್ಯ ಹಾಗೂ ಶಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮನೆ ನಿರ್ಮಾಣಗೈದ ಗುತ್ತಿಗೆದಾರ ಜನಾರ್ಧನ ಆಚಾರ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಪ್ರಸ್ತಾವನೆಯ ಮಾತುಗಳನ್ನಾಡಿದರು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಎ.ಆನಂದ ಆಚಾರ್ಯ ಸ್ವಾಗತಿಸಿ, ನಿರ್ದೇಶಕರಾದ ಕೆ ಪ್ರಕಾಶ್ ಆಚಾರ್ಯ ವಂದಿಸಿದರು. ಸಿಬ್ಬಂದಿ ಶ್ರೀಕಾಂತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ವಜ್ರಮಹೋತ್ಸವ ವರ್ಷ 2024 ಆಚರಿಸುತ್ತಿರುವ ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇವರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಹಣಕ್ಕಿಂತ ಮನುಷ್ಯನಿಗೆ ಆರೋಗ್ಯವಾಗಿರುವುದು ಮುಖ್ಯ: ಶ್ರೀ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷರು
ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವದ ಪ್ರಯುಕ್ತ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ರಿ., ಸುರತ್ಕಲ್, ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ರಿ., ಕೃಷ್ಣಾಪುರ, ಶ್ರೀ ಕಾಳಿಕಾಂಬಾ ದೇವಸ್ಥಾನ ಕುಳಾಯಿ, ಶ್ರೀ ವಿಶ್ವಬ್ರಾಹ್ಮಣ ಯುವ ಬಳಗ ಕಾಟಿಪಳ್ಳ- ಕೃಷ್ಣಾಪುರ, ವಿಶ್ವಕರ್ಮ ಸಮಾಜ ಸೇವಾ ಸಂಘ ಕುಳಾಯಿ, ವಿಶ್ವಬ್ರಾಹ್ಮಣ ಯುವ ಸೇವಾದಳ ಕುಳಾಯಿ ಇವರ ಸಹಕಾರದೊಂದಿಗೆ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ ಮತ್ತು ಕೆ.ಎಂ.ಸಿ. ಆಸ್ಪತ್ರೆ, ಬಿ.ಆರ್.ಅಂಬೇಡ್ಕರ್ ವೃತ್ತ, ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ:09.02.2025 ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ರಿ., ಸುರತ್ಕಲ್ ನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವೈದ್ಯಕೀಯ ಶಿಬಿರವನ್ನು ಡಾ| ಅಮಲ್ ದೀಪ ಪ್ರಜ್ವಲನೆ ಮಾಡುವುದರೊಂದಿಗೆ ಉದ್ಘಾಟಿಸಿದರು. ಶ್ರೀ ಪ್ರಶಾಂತ್ ಆಚಾರ್ಯ ಅಧ್ಯಕ್ಷರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ರಿ., ಸುರತ್ಕಲ್ ಮತ್ತು ಶ್ರೀ ಸುಧಾಕರ ಆಚಾರ್ಯ ಅಧ್ಯಕ್ಷರು ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ರಿ., ಕೃಷ್ಣಾಪುರ ಶಿಬಿರವನ್ನು ಉದ್ದೇಶಿಸಿ ಶುಭ ಹಾರೈಸಿದರು. ಶ್ರೀ ಡಿ. ಯೋಗೀಶ್ ಆಚಾರ್ಯ, ಅಧ್ಯಕ್ಷರು ಶ್ರೀ ಕಾಳಿಕಾಂಬಾ ದೇವಸ್ಥಾನ ಕುಳಾಯಿ, ಶ್ರೀ ಸತೀಶ ಆಚಾರ್ಯ ಅಧ್ಯಕ್ಷರು ವಿಶ್ವಕರ್ಮ ಸಮಾಜ ಸೇವಾ ಸಂಘ ಕುಳಾಯಿ, ಶ್ರೀ ಉದಯ ಆಚಾರ್ಯ ಅಧ್ಯಕ್ಷರು ಶ್ರೀ ವಿಶ್ವಬ್ರಾಹ್ಮಣ ಯುವ ಬಳಗ ಕಾಟಿಪಳ್ಳ- ಕೃಷ್ಣಾಪುರ, ಶ್ರೀ ಸಚ್ಚಿದಾನಂದ ಆಚಾರ್ಯ ಅಧ್ಯಕ್ಷರು ವಿಶ್ವಬ್ರಾಹ್ಮಣ ಯುವ ಸೇವಾದಳ ಕುಳಾಯಿ ಗೌರವ ಉಪಸ್ಥಿತಿಯಲ್ಲಿದ್ದರು.
ನಿರ್ದೇಶಕರಾದ ಶ್ರೀ ವೈ.ವಿ. ವಿಶ್ವಜ್ಞಮೂರ್ತಿ ಪ್ರಾರ್ಥನೆ ಗೈದರು. ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರುಗಳಾದ ಕೆ. ಯಜ್ಞೇಶ್ವರ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ಶ್ರೀಮತಿ ರೋಹಿಣಿ ಎಂ.ಪಿ., ಶ್ರೀ ರಮೇಶ್ ರಾವ್ ಯು. ಉಪಸ್ಥಿತರಿದ್ದರು. 180 ಮಂದಿ ಉಚಿತ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿದ್ದರು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು. ನಿರ್ದೇಶಕರಾದ ಶ್ರೀ ಕೆ. ಪ್ರಕಾಶ ಆಚಾರ್ಯ ಧನ್ಯವಾದ ಗೈದರು, ಸಂಸ್ಥೆಯ ಸಿಬ್ಬಂದಿ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.
*ಕ್ರೀಡೋತ್ಸವ 2024*
*ಕ್ರೀಡೆ ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೆ ಅತ್ಯಗತ್ಯ: ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಸುಕನ್ಯಾ ಜಗದೀಶ್ ಆಚಾರ್ಯ* ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಮಂಗಳೂರು. ಇದರ ವಜ್ರ ಮಹೋತ್ಸವದ ಪ್ರಯುಕ್ತ ಸದಸ್ಯರಿಗೆ ಮತ್ತು ಸಿಬ್ಬಂದಿಯವರಿಗೆ *ಕ್ರೀಡೋತ್ಸವ 2024* ದಿನಾಂಕ 29.12.2024ರಂದು ಮಂಗಳಾ ಕ್ರೀಡಾಂಗಣದಲ್ಲಿ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ.ಉಪೇಂದ್ರ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ , ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಸುಕನ್ಯಾ ಜಗದೀಶ್ ಆಚಾರ್ಯ ಇವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ, ಪಾರಿವಾಳ ಹಾರಿಸುದರೊಂದಿಗೆ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಮಣ್ಣಗುಡ್ಡೆ ವಾರ್ಡಿನ ಸದಸ್ಯರಾದ ಶ್ರೀಮತಿ ಸಂಧ್ಯಾ ಮೋಹನ್ ಆಚಾರ್ಯ ಮಾತನಾಡಿ ಒತ್ತಡದ ಜೀವನವನ್ನು ನಿವಾರಿಸಲು ಕ್ರೀಡೆ ಅಗತ್ಯ ಹಾಗೂ ಶ್ರೀ ಕಾಳಿಕಾಂಬಾ ಸೇವಾ ಸಮಿತಿ ರಥ ಬೀದಿ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಜಗದೀಶ್ ಆಚಾರ್ಯ ಸಿದ್ದಕಟ್ಟೆ ಶುಭ ಹಾರೈಸಿದರು ಉಪಾಧ್ಯಕ್ಷರಾದ ಶ್ರೀ ಎ ಆನಂದ ಆಚಾರ್ಯ ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಕೃಷ್ಣಾಪುರ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರು ಶ್ರೀ ಕೆ. ಯಜ್ಞೇಶ್ವರ ಆಚಾರ್ಯ, ಶ್ರೀ ವೈ. ವಿ. ವಿಶ್ವಜ್ಞಮೂರ್ತಿ, ಶ್ರೀ ವಿ. ಜಯ ಆಚಾರ್, ಶ್ರೀ ಕೆ. ಶಶಿಕಾಂತ ಆಚಾರ್ಯ, ಶ್ರೀಮತಿ ರೋಹಿಣಿ ಎಂ. ಪಿ., ಶ್ರೀ ರಮೇಶ್ ರಾವ್ ಯು., ಶ್ರೀ ಮಲ್ಲಪ್ಪ ಪತ್ತಾರ್, ಶ್ರೀ ಕೆ.ಪ್ರಕಾಶ ಆಚಾರ್ಯ, ಶ್ರೀ ಮಂಜುನಾಥ ಆಚಾರ್ಯ, ಶ್ರೀ ಚಂದ್ರಶೇಖರ ಎ. ಎಸ್. ಮತ್ತು ಸಂಸ್ಥೆಯ ಸದಸ್ಯರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಎ ಆನಂದ ಆಚಾರ್ಯ ಸ್ವಾಗತಿಸಿದರು ನಿರ್ದೇಶಕರಾದ ಶ್ರೀವೈ ವಿ ವಿಶ್ವಜ್ಞ ಮೂರ್ತಿ ಪ್ರಾರ್ಥನೆ ಗೈದರು ನಿರ್ದೇಶಕರಾದ ಶ್ರೀ ಕೆ ಪ್ರಕಾಶ್ ಆಚಾರ್ಯ ವಂದನಾರ್ಪಣೆಗೈದರು ಶ್ರೀಕಾಂತ್ ಆಚಾರ್ಯ ಮತ್ತು ಶ್ರೀಮತಿ ಉಷಾ ಮನೋಜ್ ನಿರೂಪಣೆಗೈದರು.
ಸಂಸ್ಥೆಯ ಸದಸ್ಯರು ಮತ್ತು ಸಿಬ್ಬಂದಿಯವರಿಗೆ 100 ಮೀಟರ್ ಓಟ, 200 ಮೀಟರ್ ಓಟ, 400 ಮೀಟರ್ ಓಟ, 400 ಮೀಟರ್ ರಿಲೇ, 400 ಮೀಟರ್ ವೇಗದ ನಡಿಗೆ ಮತ್ತು ಹಗ್ಗ ಜಗ್ಗಾಟ ಏರ್ಪಡಿಸಿ ವಿಜೇತರಿಗೆ ಪದಕ ಮತ್ತು ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು ಒಂದರಿಂದ ಐದನೇ ತರಗತಿಯ ಸದಸ್ಯರ ಮತ್ತು ಸಿಬ್ಬಂದಿಯವರ ಮಕ್ಕಳಿಗೆ 50 ಮೀಟರ್ ಓಟ, ಕಪ್ಪೆ ಜಿಗಿತ ಮತ್ತು ಬಾಲ್ ಎಸೆತ ಸ್ಪರ್ಧೆ ಏರ್ಪಡಿಸಲಾಯಿತು.
ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ನೂತನ 17ನೇ ಬ್ಯಾಂಕಿಂಗ್ ಶಾಖೆ ಹಿರಿಯಡ್ಕದಲ್ಲಿ ಉದ್ಘಾಟನೆಗೊಂಡಿತು.
ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ನೂತನ 17ನೇ ಬ್ಯಾಂಕಿಂಗ್ ಶಾಖೆ ಹಿರಿಯಡ್ಕದ ರಾಜರಾಜೇಶ್ವರಿ ಕಾಂಪ್ಲೆಕ್ಸ್‍ನಲ್ಲಿ ದಿನಾಂಕ:23.12.2024 ಸೋಮವಾರದಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ವೇಣುಗಿರಿ, ಕಟಪಾಡಿಯ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಮತ್ತು ಶ್ರೀ ವಿಶ್ವಕರ್ಮ ಜಗದ್ಗುರು ಪೀಠ, ಅರೆಮಾದನಹಳ್ಳಿ, ಹಾಸನದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿದರು.
ವೀರಭದ್ರ ಸ್ವಾಮಿ ಸಾಂಸ್ಕೃತಿಕ ಕಲಾ ಕೇಂದ್ರ್ರದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು, ಸಂಸ್ಥೆಯು ಅಧ್ಯಕ್ಷರು ಮತ್ತು ನಿರ್ದೇಶಕರ ನೇತೃತ್ವದಲ್ಲಿ ವರ್ಷದಲ್ಲಿ ಒಂದು ನೂತನ ಶಾಖೆ ಆರಂಭವಾಗುತ್ತಾ ಪ್ರಗತಿಪಥದಲ್ಲಿದೆ, ಸಂಸ್ಥೆಯಿಂದ ಗ್ರಾಹಕರಿಗೆ ಉತ್ತಮ ಸೇವೆ ಸಿಗಲಿ ಎಂದು ಆಶೀರ್ವದಿಸಿದರು. ಒಬ್ಬ ವ್ಯಕ್ತಿ ತನ್ನ ನಿಸ್ವಾರ್ಥ ಸೇವೆಯಿಂದ ಒಂದು ಸಂಸ್ಥೆಯನ್ನು ಹುಟ್ಟು ಹಾಕಿದ್ದಲ್ಲಿ ಸಂಸ್ಥೆ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಈ ಸೊಸೈಟಿ ಸಾಕ್ಷಿ. ಪಾಲ್ಕೆ ಬಾಬುರಾಯ ಆಚಾರ್ಯರಿಂದ ಪ್ರಾರಂಭವಾದ ಸಂಸ್ಥೆ ಅವಳಿ ಜಿಲ್ಲೆಗಳಲ್ಲಿ ಹಲವು ಶಾಖೆಗಳನ್ನು ಹೊಂದಿದ್ದು, ಇನ್ನಷ್ಟು ಶಾಖೆಗಳನ್ನು ಆರಂಭಿಸಲಿ ಎಂದು ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರು ಆಶೀರ್ವದಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯರು, ಆರ್ಥಿಕ ವ್ಯವಹಾರದ ಅಭಿವೃದ್ಧಿಗೆ ಸಹಾಯ ಕೇಳುವುದಕ್ಕೆ ಬಂದಾಗ ಹೆಗಲು ಕೊಡುವಂತಿರಬೇಕು. ಅಂತಹ ಸೇವೆ ನೀಡುವ ಸಿಬ್ಬಂದಿ ನಮ್ಮಲ್ಲಿ ಇದ್ದಾರೆ, ಹೀಗಾಗಿ ಸಂಸ್ಥೆ ಬೆಳೆಯುತ್ತಿದೆ ಎಂದರು. ಕಾಪು ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಜನರ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿದ್ದಾರೆ. ಹಣ ನಿಂತ ನೀರು ಆಗಬಾರದು, ಹರಿವಂತಿರಬೇಕು ಎಂದು ತಿಳಿಸಿ, ಶುಭ ಹಾರೈಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿಯವರು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿರುವ ಸಹಕಾರಿ ಸಂಸ್ಥೆಗೆ ಶುಭ ಹಾರೈಸಿದರು. ಗಣಕೀಕರಣ ವ್ಯವಸ್ಥೆಯನ್ನು ಉದ್ಯಮಿ ನಟರಾಜ್ ಹೆಗ್ಡೆ ಉದ್ಘಾಟಿಸಿದರು. ಸಹಕಾರ ಸಂಘಗಳ ಉಪನಿಬಂಧಕರು, ಉಡುಪಿ ಜಿಲ್ಲೆ ಲಾವಣ್ಯಾ ಆರ್ ಕೆ. ಅವರು ಠೇವಣಿದಾರರಿಗೆ ಠೇವಣಿ ಪತ್ರವನ್ನು ವಿತರಿಸಿದರು.
ಸುಮಾರು 35 ವರ್ಷಗಳಿಂದ ನಿಸ್ವಾರ್ಥ ಸೇವೆ ಗೈಯುತ್ತಿರುವ ನಾಟಿವೈದ್ಯೆ ಪದ್ಮಾವತಿ ಆಚಾರ್ಯರಿಗೆ ಅತಿಥಿಗಳಿಂದ ಗೌರವ ಸನ್ಮಾನಿಸಲಾಯಿತು. ಕಿಡ್ನಿ ವೈಫಲ್ಯದ ಚಿಕಿತ್ಸೆಗಾಗಿ ಶ್ರೀಮತಿ ಶ್ರುತಿ ಇವರಿಗೆ ಆರ್ಥಿಕ ಸಹಾಯ ನೀಡಲಾಯಿತು.
ವೇಣುಗಿರಿ ದೇವಸ್ಥಾನ ಮೊಕ್ತೇಸರ ಮುರಹರಿ ಕೆ. ಆಚಾರ್ಯ, ಹಿರಿಯಡ್ಕದ ಕಾಮತ್ ಕ್ಲಿನಿಕ್‍ನ ಡಾ| ದೇವದಾಸ್ ಕಾಮತ್, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ, ಕಟ್ಟಡ ಮಾಲಕರಾದ ಶ್ರೀ ರವಿ. ಎ. ಪೂಜಾರಿ, ವಿಶ್ವಕರ್ಮ ಶಿಲ್ಪಕಲಾ ಸಂಘದ ಅಧ್ಯಕ್ಷ ಸತ್ಯಪ್ರಸಾದ್ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕರಾದ ಶ್ರೀ ಕೆ. ಯಜ್ಞೇಶ್ವರ ಆಚಾರ್ಯ, ಶ್ರೀ ವೈ.ವಿ.ವಿಶ್ವಜ್ಞಮೂರ್ತಿ, ಶ್ರೀ ವಿ. ಜಯ ಆಚಾರ್, ಶ್ರೀ ಕೆ. ಶಶಿಕಾಂತ ಆಚಾರ್ಯ, ಶ್ರೀ ಮಲ್ಲಪ್ಪ ಎನ್. ಪತ್ತಾರ್, ಶ್ರೀಮತಿ ರೋಹಿಣಿ ಎಂ.ಪಿ., ಶ್ರೀಮತಿ ಜ್ಯೋತಿ ಎಂ. ವಿ., ಶ್ರೀ ರಮೇಶ್ ರಾವ್ ಯು. ಶ್ರೀ ಕೆ. ಪ್ರಕಾಶ ಆಚಾರ್ಯ, ಶ್ರೀ ಮಂಜುನಾಥ ಆಚಾರ್ಯ ಮತ್ತು ಶ್ರೀ ಚಂದ್ರಶೇಖರ್ ಎ.ಎಸ್. ಹಾಗೂ ಪ್ರಧಾನವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ, ಪ್ರಭಾರ ಶಾಖಾವ್ಯವಸ್ಥಾಪಕರಾದ ಶ್ರೀ ರವಿರಾಜ್ ಎಸ್. ಆಚಾರ್ಯ ಉಪಸ್ಥಿತರಿದ್ದರು. ನಿರ್ದೇಶಕರಾದ ಶ್ರೀ ವೈ.ವಿ.ವಿಶ್ವಜ್ಞಮೂರ್ತಿ ಪ್ರಾರ್ಥನೆಗೈದರು, ಉಪಾಧ್ಯಕ್ಷರಾದ ಶ್ರೀ ಎ. ಆನಂದ ಆಚಾರ್ಯ ಸ್ವಾಗತಿಸಿದರು, ಪ್ರಧಾನವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಪ್ರಸ್ತಾವನೆಗೈದರು. ಶ್ರೀ ಪ್ರಕಾಶ್ ಆಚಾರ್ಯ ವಂದಿಸಿದರು. ಶ್ರೀ ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಯಿಂದ 2025 ನೇ ಸಾಲಿನ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ
ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಆಡಳಿತ ಕಛೇರಿ, "ವಿಶ್ವಸೌಧ" ಕಟ್ಟಡದಲ್ಲಿ ದಿನಾಂಕ:10.12.2024 ರಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯ, ಉಪಾಧ್ಯಕ್ಷರಾದ ಶ್ರೀ ಎ. ಆನಂದ ಆಚಾರ್ಯ, ನಿರ್ದೇಶಕರಾದ ಶ್ರೀ ಕೆ. ಯಜ್ಞೇಶ್ವರ ಆಚಾರ್ಯ, ಶ್ರೀ ವೈ. ವಿ. ವಿಶ್ವಜ್ಞಮೂರ್ತಿ, ಶ್ರೀ ಜಯ ವಿ. ಆಚಾರ್ಯ, ಪ್ರಧಾನವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಹಾಗೂ ಪುತ್ತೂರು ಶಾಖಾ ಪ್ರಭಾರ ವ್ಯವಸ್ಥಾಪಕರಾದ ಶ್ರೀ ಕಿರಣ್ ಬಿ.ವಿ. ಇವರ ಉಪಸ್ಥಿತಿಯಲ್ಲಿ ಸಂಸ್ಥೆಯ ವತಿಯಿಂದ 2025ನೇ ವರ್ಷದ ಕ್ಯಾಲೆಂಡರ್ ಹಾಗೂ ಡೈರಿಯನ್ನು ಬಿಡುಗಡೆಗೊಳಿಸಲಾಯಿತು.
"ಉತ್ತಮ ವಿವಿಧೊದ್ದೇಶ ಸಹಕಾರ ಸಂಘ ವಿಶೇಷ ಪ್ರಶಸ್ತಿ"
ದಿನಾಂಕ: 16.11.2024 ರಂದು 71ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಕರಾವಳಿ ಉತ್ಸವ ಕ್ರೀಡಾಂಗಣದಲ್ಲಿ ಜರುಗಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾರಾಟ ಫೆಡರೇಶನ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಇವರಿಂದ " ಉತ್ತಮ ವಿವಿಧೊದ್ದೇಶ ಸಹಕಾರ ಸಂಘ ವಿಶೇಷ ಪ್ರಶಸ್ತಿ" ಯನ್ನು ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯ ಪಡೆದುಕೊಳ್ಳುತ್ತಿರುವುದು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷರಾದ ಶ್ರೀ ಜಿ. ಟಿ. ದೇವೇಗೌಡ, ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು. ಟಿ. ಖಾದರ್, ಸನ್ಮಾನ್ಯ ಶಾಸಕರು ಹಾಗೂ ಮಾಜಿ ಉಪಮುಖ್ಯ ಮಂತ್ರಿಗಳಾದ ಶ್ರೀ ಲಕ್ಷ್ಮಣ ಸಂಗಪ್ಪ ಸವದಿ, ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಭರತ್ ಶೆಟ್ಟಿ ವೈ, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡುರಾವ್, ಶ್ರೀ ಯಶ್‍ಪಾಲ್ ಎ. ಸುವರ್ಣ ಮಾನ್ಯ ಶಾಸಕರು ಮತ್ತು ಅಧ್ಯಕ್ಷರು, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಮಹಾಮಂಡಳ ನಿ. ಮಂಗಳೂರು, ಶ್ರೀ ಮನೋಜ್ ಕುಮಾರ್ ಕೋಡಿಕಲ್ ಮಾನ್ಯ ಮಹಾಪೌರರು, ಮಂಗಳೂರು ಮಹಾನಗರ ಪಾಲಿಕೆ. ಶ್ರೀ ಕೆ.ಪಿ. ಸುಚರಿತ ಶೆಟ್ಟಿ ಅಧ್ಯಕ್ಷರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಉಕ್ಕೂಟ ನಿ., ಮಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶ್ರೀ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಹಾಗೂ ಸಹಕಾರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಉಚಿತ ನೇತ್ರ ತಪಾಸಣೆ, ಹೃದಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ
ವಿಶ್ವಬ್ರಾಹ್ಮಣ ಸೇವಾ ಸಂಘ ರಿ. ಬೊಳುವಾರು, ವಿಶ್ವಕರ್ಮ ಯುವ ಸಮಾಜ ರಿ. ಬೊಳುವಾರು, ವಿಶ್ವಕರ್ಮ ಮಹಿಳಾ ಮಂಡಳಿ ಬೊಳುವಾರು ಹಾಗೂ ವಜ್ರಮಹೋತ್ಸವ ವರ್ಷ ಆಚರಿಸುತ್ತಿರುವ ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಇದರ ಜಂಟಿ ಪ್ರಾಯೋಜಕತ್ವದಲ್ಲಿ ರೋಟರಿ ಕ್ಯಾಂಪ್ಕೋ - ಬ್ಲಡ್ ಬ್ಯಾಂಕ್ ಪುತ್ತೂರು, ರೋಟರಿ ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ, ಕೆಎಂಸಿ ಆಸ್ಪತ್ರೆ ಮಂಗಳೂರು ಹಾಗೂ ರೋಟರಾಕ್ಟ್ ಕ್ಲಬ್ ಇದರ ಸಹಕಾರದೊಂದಿಗೆ ಸೆ.22 ರಂದು ಬೊಳುವಾರು ವಿಶ್ವಕರ್ಮ ಸಭಾಭವನ ಪುತ್ತೂರಿನಲ್ಲಿ ರಕ್ತದಾನ, ನೇತ್ರ ತಪಾಸಣೆ, ಹೃದಯ ತಪಾಸಣಾ ಉಚಿತ ಶಿಬಿರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಇದರ ಪ್ರಧಾನವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶ್ರೀಧರ ಆಚಾರ್ಯ ಕೊಕ್ಕಡ ಇವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ರೊ|ಡಾ|ಶ್ರೀಪತಿ ರಾವ್ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಹಾಗೂ ಡಾ| ನರಸಿಂಹ ಪೈ, ಹೃದಯ ರೋಗ ತಜ್ಞರು, ಕೆ.ಎಂ.ಸಿ. ಮಂಗಳೂರು ಇವರು ಆಗಮಿಸಿದ್ದರು. ವೇದಿಕೆಯಲ್ಲಿ ಶ್ರೀ ಪ್ರಕಾಶ ಆಚಾರ್ಯ ಕೆ., ಅಧ್ಯಕ್ಷರು ವಿಶ್ವಕರ್ಮ ಯುವ ಸಮಾಜ, ಶ್ರೀಮತಿ ಇಂದಿರಾ ಪುರುಷೋತ್ತಮ್, ಅಧ್ಯಕ್ಷರು ವಿಶ್ವಕರ್ಮ ಮಹಿಳಾ ಮಂಡಳಿ, ರೊ|ಸುಬ್ರಮಣಿ ಅಧ್ಯಕ್ಷರು ರೋರ‍್ಯಾಕ್ಟ್ ಕ್ಲಬ್, ಪುತ್ತೂರು, ಶ್ರೀ ಎ. ಆನಂದ ಆಚಾರ್ಯ, ಉಪಾಧ್ಯಕ್ಷರು ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟಿçಯಲ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಹಾಗೂ ಶ್ರೀ ವೈ.ವಿ.ವಿಶ್ವಜ್ಞಮೂರ್ತಿ, ನಿರ್ದೇಶಕರು ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟಿçಯಲ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು, ರೋಟರಿ ಕ್ಯಾಂಪ್ಕೋ-ಬ್ಲಡ್ ಬ್ಯಾಂಕಿನ ಡಾ|| ರಾಮಚಂದ್ರ ಹಾಗೂ ಸೀತಾರಾಮ ಭಟ್ ಉಪಸ್ಥಿತರಿದ್ದರು.
ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನವ್ಯವಸ್ಥಾಪಕರು ಶ್ರೀ ಯಜ್ಞೇಶ್ವರ ಕಾರ್ಯಕ್ರಮ ಉದ್ಘಾಟಿಸಿ, ತನ್ನ ಮಾತಿನಲ್ಲಿ, ಸಮಾಜದ ಜನರ ಆರೋಗ್ಯದ ಕಾಳಜಿ ಮಾಡುವ ಉದ್ದೇಶದಿಂದ ಸಂಘ ಸಂಸ್ಥೆಗಳು ಜತೆಗೂಡಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಬೇಕೆಂದರು. ಸೊಸೈಟಿಯು ವಜ್ರಮಹೋತ್ಸವದ ಸಂಭ್ರಮದಲ್ಲಿದ್ದು, ಹಲವು ಜನೋಪಯೋಗಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ವಿಶ್ವಕರ್ಮ ಯುವ ಸಮಾಜ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ರಕ್ತದಾನ ಶ್ರೇಷ್ಠ ದಾನ, ಇದರೊಂದಿಗೆ ನೇತ್ರ ತಪಾಸಣೆ ಹಾಗೂ ಅತಿ ಅವಶ್ಯಕವಾದ ಹೃದಯ ತಪಾಸಣಾ ಶಿಬಿರವನ್ನು ಉಚಿತವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಪಿ.ವಿ. ಸುಬ್ರಮಣಿ ಮಾತನಾಡಿ ಹಣವಿದ್ದವ ಶ್ರೀಮಂತನಲ್ಲ, ಆರೋಗ್ಯ ಇದ್ದವನು ಮಾತ್ರ ಶ್ರೀಮಂತ ಎಂದರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ|| ಶ್ರೀಪತಿ ರಾವ್ ಮಾತನಾಡಿ, ಯುವಕರಲ್ಲಿ ಕಂಡು ಬರುವ ಹಾರ್ಟ್ ಅಟ್ಯಾಕ್, ಸಣ್ಣ ಪುಟ್ಟ ವಿಷಯಕ್ಕೆ ಒತ್ತಡ ಮೊದಲಾದ ಸಮಸ್ಯೆಗಳಿಗೆ ನಮ್ಮ ಜೀವನ ಶೈಲಿ ಕಾರಣ, ಇಂತಹ ಆರೋಗ್ಯ ಸಮಸ್ಯೆಗಳನ್ನು ತಡೆಯಬೇಕು ಎಂದರೆ ಆರೋಗ್ಯ ಶಿಬಿರ ಅಗತ್ಯ ಎಂದರು.
ಪ್ರಸಾದ್ ನೇತ್ರಾಲಯ, ಅತ್ತಾವರ ಕೆ ಎಂ ಸಿ ರೋಟರಿ, ಕ್ಯಾಂಪ್ಕೊ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಶ್ರೀ ಕೆ. ಶಶಿಕಾಂತ ಆಚಾರ್ಯ, ಶ್ರೀಮತಿ ರೋಹಿಣಿ ಎಂ.ಪಿ., ಹಾಗೂ ಶ್ರೀ ಕೆ. ಪ್ರಕಾಶ ಆಚಾರ್ಯರು ಮತ್ತಿತರರು ಉಪಸ್ಥಿತರಿದ್ದರು.
ಭವ್ಯ ವಾದಿರಾಜ್ ಪ್ರಾರ್ಥಿಸಿದರು, ವಿಶ್ವಬ್ರಾಹ್ಮಣ ಸೇವಾ ಸಂಘದ ಭುಜಂಗ ಆಚಾರ್ಯ ಸ್ವಾಗತಿಸಿ, ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಪುರುಷೋತ್ತಮ ಆಚಾರ್ಯ ವಂದಿಸಿದರು. ಶ್ರೀ ಕಿಶನ್ ಬಿ. ವಿ. ಕಾರ್ಯಕ್ರಮವನ್ನು ನಿರೂಪಿಸಿದರು. ಈ ಉಚಿತ ತಪಾಸಣಾ ಕಾರ್ಯಕ್ರಮದಲ್ಲಿ 36 ಯುನಿಟ್ ರಕ್ತ ಸಂಗ್ರಹಣೆಯಾಗಿದ್ದು, 140 ಸದಸ್ಯರು ಇಸಿಜಿ ಹಾಗೂ 135 ಸದಸ್ಯರು ನೇತ್ರ ತಪಾಸಣೆೆಯ ಉಚಿತ ಪ್ರಯೋಜನ ಪಡೆದುಕೊಂಡರು.
ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯಿಂದ ಸ್ನೇಹ ಭಾರತಿ ವಿದ್ಯಾ ಸಂಸ್ಥೆಯ"ನಮ್ಮ ಹಿರಿಯರ ಮನೆಗೆ" ದಿನಬಳಕೆ ವಸ್ತುಗಳ ಹಸ್ತಾಂತರ ಕಾರ್ಯಕ್ರಮ
ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ದಿನಾಂಕ 10.09.2024 ರಂದು ಸ್ನೇಹ ಭಾರತಿ ವಿದ್ಯಾ ಸಂಸ್ಥೆಯ "ನಮ್ಮ ಹಿರಿಯರ ಮನೆ", ಗುಡ್ಡೆ ಅಂಗಡಿ, ಅರಳಾ, ಬಂಟ್ವಾಳ ತಾಲೂಕಿನ ವೃದ್ಧಾಶ್ರಮಕ್ಕೆ ಭೇಟಿ ನೀಡಿ 60 ವರ್ಷದಾಟಿದ ವೃದ್ದರಿಗೆ ನಮ್ಮ ಸಂಸ್ಥೆಯ ವತಿಯಿಂದ 50 ಬೆಡ್‍ಶೀಟನ್ನು ನೀಡಲಾಯಿತು. ನಮ್ಮ ಸಂಸ್ಥೆಯ ನಿರ್ದೇಶಕರಾದ ಶ್ರೀ ವೈ.ವಿ. ವಿಶ್ವಜ್ಞಮೂರ್ತಿ, ಶ್ರೀಮತಿ ರೋಹಿಣಿ ಎಂ ಪಿ, ಶ್ರೀ ಯು ರಮೇಶ್ ರಾವ್ ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಹಾಗೂ ಸಿಬ್ಬಂದಿ ಶ್ರೀ ಪ್ರವೀಣ್ ಆಚಾರ್ಯ ಉಪಸ್ಥಿತರಿದ್ದರು.ಸ್ನೇಹಭಾರತಿಯ "ನಮ್ಮ ಹಿರಿಯರ ಮನೆ" ಆಶ್ರಮದ ನಿರ್ವಾಹಕರಾದ ಶ್ರೀ ರಾಮೆ ಗೌಡ ವಿಜಾಪುರ ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು.
ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ.,ಮಂಗಳೂರು.
ಎಸ್.ಕೆ.ಜಿ.ಐ.ಕೋ-ಆಪ್.ಸೊಸೈಟಿಯ ವಾರ್ಷಿಕ ಮಹಾಸಭೆ
ರೂ.4.95 ಕೋಟಿ ಲಾಭ
ವಜ್ರಮಹೋತ್ಸವ ವರ್ಷದ ಪ್ರಯುಕ್ತ ಸದಸ್ಯರಿಗೆ ಶೇ.20 ಡಿವಿಡೆಂಡು ಘೋಷಣೆ
2023-2024ನೇ ಸಾಲಿನ ಮಹಾಸಭೆಯಲ್ಲಿ
ಎಸ್.ಕೆ.ಜಿ.ಐ.-ಪಾಲ್ಕೆ ಪ್ರಶಸ್ತಿ ಪ್ರದಾನ, ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ
ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ 2023-2024 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ:25-08-2024ರಂದು ಶ್ರೀ ಪಿ. ಉಪೇಂದ್ರ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ, ``ಉರ್ವಚಚ್ ಸೆಂಟಿನರಿ ಹಾಲ್``, ಲೇಡಿಹಿಲ್ ಮಂಗಳೂರು ಇದರ ಸಭಾಭವನದಲ್ಲಿ ಜರಗಿತು.
ಪ್ರಧಾನವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಇವರು 2023-2024ರ ಸಾಲಿನ ವಾರ್ಷಿಕ ವರದಿ, ಲೆಕ್ಕಪರಿಶೋಧಿತ ಆರ್ಥಿಕ ತ:ಖ್ತೆಗಳು, ಅನುಪಾಲನಾ ವರದಿ, ಲಾಭಾಂಶದ ವಿಂಗಡಣೆ, ಬಜೆಟಿಗಿಂತ ಹೆಚ್ಚಾಗಿ ಖರ್ಚಾಗಿರುವುದನ್ನು, 2024-2025ನೇ ಸಾಲಿನ ಆಯ-ವ್ಯಯ ಪಟ್ಟಿಯನ್ನು ಹಾಗೂ 2024-2025ರ ಸಾಲಿನ ಕಾರ್ಯಚಟುವಟಿಕೆಗಳನ್ನು ಸಭೆಯಲ್ಲಿ ಮಂಡಿಸಿ, ಸದಸ್ಯರ ಸರ್ವಾನುಮತದ ಅನುಮೋದನೆ ಪಡೆದುಕೊಳ್ಳಲಾಯಿತು.
ವಜ್ರಮಹೋತ್ಸವ ವರ್ಷದ ಪ್ರಯುಕ್ತ 2023-2024ರ ಸಾಲಿಗೆ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡು ಪಾವತಿಗೆ ಮಂಜೂರಾತಿ ಪಡೆಯಲಾಯಿತು.
ಪಂಚಕಸುಬುಗಳಲ್ಲಿ ಸಾಧನೆಗೈದ ಐದು ಮಂದಿ ಶಿಲ್ಪಿಗಳಾದ ಸ್ವರ್ಣಶಿಲ್ಪ- ಶ್ರೀ ಎಚ್. ಗೋಪಾಲ ಆಚಾರ್ಯ-ಬೆಳ್ತಂಗಡಿ, ಕಾಷ್ಠಶಿಲ್ಪ- ಶ್ರೀ ಮಾಧವ ಆಚಾರ್ಯ- ಸಂತೆಕಟ್ಟೆ, ಉಡುಪಿ, ಎರಕ ಶಿಲ್ಪ- ಶ್ರೀ ರಾಮಚಂದ್ರ ಆಚಾರ್ಯ ಕುಂಟಾಡಿ, ಕಾರ್ಕಳ, ಅಯಸ್ ಶಿಲ್ಪ- ಶ್ರೀ ಸೀತಾರಾಮ ಆಚಾರ್ಯ- ಗುಂಡಮಜಲು, ಮುಡಿಪು, ಶಿಲಾ ಶಿಲ್ಪ- ಶ್ರೀ ಸೂರ್ಯಕಾಂತ ಆಚಾರ್ಯ- ಶಿರ್ವ ಇವರಿಗೆ 2023-2024ರ ಸಾಲಿನ ಎಸ್.ಕೆ.ಜಿ.ಐ.ಪಾಲ್ಕೆ - ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಶ್ರೀ ಪಿ. ನಾರಾಯಣ ಆಚಾರ್-ಕುಳಾಯಿ (ವೈದಿಕ ಕ್ಷೇತ್ರ), ಡಾ|| ಎಸ್. ಪಿ. ಗುರುದಾಸ್-ಮಂಗಳೂರು (ಹರಿಕಥಾ ಕ್ಷೇತ್ರ), ಶ್ರೀ ರಮೇಶ್ ಕೆ.-ಕಲ್ಲಡ್ಕ (ಕಲಾ ಕ್ಷೇತ್ರ), ಶ್ರೀಮತಿ ಮೀನಾಕ್ಷಿ ನಾರಾಯಣ ಆಚಾರ್- ಬಂಟ್ವಾಳ (ನಾಟಿ ವೈದ್ಯೆ), ಕುಮಾರಿ ಶ್ರೇಯ ಎ.- ಅಲಂಕಾರು (ಯಕ್ಷಗಾನ ಕ್ಷೇತ್ರ) ಇವರಿಗೆ ಸನ್ಮಾನ ನೀಡಿ ಅಭಿನಂದಿಸಲಾಯಿತು.
2023-2024 ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ಶಾಖೆಗಳನ್ನು ಎರಡು ವರ್ಗಗಳನ್ನಾಗಿ ವಿಂಗಡಿಸಿ ಒಂದನೇ ವರ್ಗದಲ್ಲಿ ಪ್ರಥಮ ಸ್ಥಾನ ಕೋಟೇಶ್ವರ ಶಾಖೆ ಮತ್ತು ದ್ವಿತೀಯ ಸ್ಥಾನ ಮಂಗಳೂರು ಶಾಖೆಗೆ ನೀಡಲಾಯಿತು. ಎರಡನೇ ವರ್ಗದಲ್ಲಿ ಪ್ರಥಮ ಸ್ಥಾನ ಶಿರ್ವ-ಮಂಚಕಲ್ ಶಾಖೆಗೆ ಮತ್ತು ದ್ವಿತೀಯ ಸ್ಥಾನ ಬೆಳ್ಳಂಪಳ್ಳಿ ಶಾಖೆಗೆ ನೀಡಲಾಯಿತು ಹಾಗೂ ಪೆÇ್ರೀತ್ಸಾಹಕ ಪ್ರಶಸ್ತಿಯನ್ನು ಗುರುವಾಯನಕೆರೆ ಶಾಖೆಗೆ ನೀಡಲಾಯಿತು.
2023-2024ನೇ ಸಾಲಿನಲ್ಲಿ ರೂ.4,95,81,869.97/- ನಿವ್ವಳ ಲಾಭಗಳಿಸಿದ್ದು, ರೂ.21,706 ಲಕ್ಷ ಠೇವಣಿ ಇದ್ದು, ರೂ.18,994.64 ಲಕ್ಷ ಸದಸ್ಯರ ಸಾಲ ಹೊರಬಾಕಿ ಇದ್ದು, ಒಟ್ಟು ವ್ಯವಹಾರವು ರೂ.1,009.21ಕೋಟಿ ನಡೆಸಿದ್ದು, ಸೊಸೈಟಿಯ ದುಡಿಯುವ ಬಂಡವಾಳ ರೂ.24,775.37 ಲಕ್ಷ ಇರುತ್ತದೆ. ಸೊಸೈಟಿಯ ಆಪದ್ಧನ ನಿಧಿ ರೂ.1,032.16 ಲಕ್ಷ, ಕಟ್ಟಡ ನಿಧಿ ರೂ.264.99 ಲಕ್ಷ ಇರುತ್ತದೆ. ದ.ಕನ್ನಡ, ಉಡುಪಿ ಜಿಲ್ಲೆಯಾದ್ಯಂತ 17 ಬ್ಯಾಂಕಿಂಗ್ ಹಾಗೂ 1 ಕೈಗಾರಿಕಾ ಶಾಖೆ, ಆಡಳಿತ ಕಛೇರಿ, ಹಾಗೂ ಉಳಿದ 6 ಶಾಖೆಗಳು ಸ್ವಂತಕಟ್ಟಡದಲ್ಲಿ ಕಾರ್ಯ ನಿರ್ವಹಿಸಿ, ಸದಸ್ಯರ ಬೇಡಿಕೆಗೆ ಸ್ಪಂದಿಸಿ ವ್ಯವಹಾರ ನಡೆಸುತ್ತಿದೆ. ಠೇವಣಿದಾರರಿಗೆ ಆಕರ್ಷಕ ಬಡ್ಡಿದರ ನೀಡುತ್ತಾ, ಸದಸ್ಯರಿಗೆ ಶೇ.20% ರಷ್ಟು ಡಿವಿಡೆಂಡು ಘೋಷಣೆ ಮಾಡಲಾಗಿದೆ.ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆಗೈಯುತ್ತಾ ಸದಸ್ಯರಿಗೆ ಕಳೆದ 34 ವರ್ಷ ದಿಂದ ಡಿವಿಡೆಂಡು ನೀಡುತ್ತಾ, ಸದಸ್ಯರ ವಿಶ್ವಾಸಕ್ಕೆ ಪಾತ್ರವಾಗಿದೆ. ಅಧ್ಯಕ್ಷರಾದ ಶ್ರೀ ಪಿ.ಉಪೇಂದ್ರ ಆಚಾರ್ಯರವರು ಮಾತನಾಡಿ ನಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳು ಎಲ್ಲರ ಹೃದಯ ತಟ್ಟಿದಲ್ಲಿ ಅದೇ ಸಂತೃಪ್ತಿ ಎಂದರು ಹಾಗೂ ಸೊಸೈಟಿಯ ಬೆಳವಣಿಗೆಗಾಗಿ ಸಹಕರಿಸಿ-ಪೆÇ್ರೀತ್ಸಾಹಿಸಿದ ಎಲ್ಲಾ ನಿರ್ದೇಶಕರನ್ನು, ಸದಸ್ಯರನ್ನು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.
ನ್ಯಾಯವಾದಿ ಹಾಗೂ ನಮ್ಮ ಸಂಸ್ಥೆಯ ಕಾನೂನು ಸಲಹೆಗಾರ ಶ್ರೀ ಎಂ. ಪುರುಷೋತ್ತಮ ಭಟ್ ಸಂಸ್ಥೆಯನ್ನು ಪ್ರಶಂಸಿದರು ಹಾಗೂ ಸಲಹೆ ಮಾರ್ಗದರ್ಶನ ನೀಡಿದರು. ಸನ್ಮಾನಿತರಲ್ಲಿ ಶ್ರೀ ಸೀತಾರಾಮ ಆಚಾರ್ಯ, ಮುಡಿಪು ಹಾಗೂ ಸೂರ್ಯಕಾಂತ ಆಚಾರ್ಯ, ಶಿರ್ವ ಇವರು ಸಂಸ್ಥೆಗೆ ಶುಭ ಹಾರೈಸಿದರು. ಡಾ| ಎಸ್.ಪಿ. ಗುರುದಾಸ್ ಮಾತನಾಡಿ ಪಾಲ್ಕೆ ಬಾಬುರಾಯ ಆಚಾರ್ಯರ ಆದರ್ಶ ಸಂಸ್ಥೆಯ ಬೆಳವಣಿಗೆಗೆ ಸಾಧ್ಯವಾಯಿತು ಎಂದರು. ಶ್ರೀ ರಮೇಶ ಕೆ., ಕಲ್ಲಡ್ಕ,
ಶ್ರೀ ಪಿ. ನಾರಾಯಣ ಆಚಾರ್, ಕುಳಾಯಿ ಇವರು ಸಂಸ್ಥೆಯು ವಿಶ್ವ ಮಾನ್ಯವಾಗಲಿ ಎಂದು ಶುಭ ನುಡಿಗಳನ್ನಾಡಿದರು. ಕು| ಶ್ರೇಯಾ ಎ ಇವರು ಯಕ್ಷಗಾನ ಹಾಡಿನ ಮೂಲಕ ಸಂಸ್ಥೆಯನ್ನು ಪಾಲ್ಕೆ ಬಾಬುರಾಯ ಆಚಾರ್ಯರ ನಮನದೊಂದಿಗೆ ಹಾಡಿ ಹೊಗಳಿ ನೆರೆದವರನ್ನು ರಂಜಿಸಿದರು.
ಪುರೋಹಿತ್ ವೈ.ವಿ.ವಿಶ್ವಜ್ಞಮೂರ್ತಿ ಇವರು ಪ್ರಾರ್ಥನೆಗೈದು, ಉಪಾಧ್ಯಕ್ಷರಾದ ಶ್ರೀ ಎ. ಆನಂದ ಆಚಾರ್ಯರು ಸ್ವಾಗತಿಸಿದರು. ಶ್ರೀಮತಿ ಉಷಾ ಮನೋಜ್ ಹಾಗೂ ಶ್ರೀಕಾಂತ ಕಾರ್ಯಕ್ರಮದ ನಿರೂಪಣೆ ಗೈದರು.
ಉಪಾಧ್ಯಕ್ಷರಾದ ಶ್ರೀ ಎ. ಆನಂದ ಆಚಾರ್ಯ ಹಾಗೂ ನಿರ್ದೇಶಕರಾದ ಶ್ರೀ ಕೆ.ಯಜ್ಞೇಶ್ವರ ಆಚಾರ್ಯ, ಶ್ರೀ ವೈ.ವಿ.ವಿಶ್ವಜ್ಞಮೂರ್ತಿ, ಶ್ರೀ ಜಯ ವಿ.ಆಚಾರ್ಯ, ಶ್ರೀ ಕೆ. ಶಶಿಕಾಂತ್ ಆಚಾರ್ಯರು, ಶ್ರೀ ಮಲ್ಲಪ್ಪ ಎನ್ ಪತ್ತಾರ್, ಶ್ರೀಮತಿ ರೋಹಿಣಿ ಎಂ.ಪಿ., ಶ್ರೀಮತಿ ಜ್ಯೋತಿ ಎಂ.ವಿ., ಶ್ರೀ ರಮೇಶ್ ರಾವ್ ಯು. ಶ್ರೀ ಪ್ರಕಾಶ್ ಆಚಾರ್ಯ ಕೆ., ಶ್ರೀ ಮಂಜುನಾಥ ಆಚಾರ್ಯ ಮತ್ತು ಶ್ರೀ ಚಂದ್ರಶೇಖರ ಎ.ಎಸ್. ಉಪಸ್ಥಿತರಿದ್ದರು. ನಿರ್ದೇಶಕರಾದ ಶ್ರೀ ಕೆ.ಯಜ್ಞೇಶ್ವರ ಆಚಾರ್ಯ ರವರ ವಂದನಾರ್ಪಣೆಯೊಂದಿಗೆ ವಾರ್ಷಿಕ ಮಹಾಸಭೆಯು ಮುಕ್ತಾಯವಾಯಿತು.
ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯಿಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಅಗತ್ಯ ವಸ್ತುಗಳ ಹಸ್ತಾಂತರ ಕಾರ್ಯಕ್ರಮ
ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ಬೆಳ್ಳಂಪಳ್ಳಿಯ ಜೈ ಹಿಂದ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಅಗತ್ಯ ವಸ್ತುಗಳ ಹಸ್ತಾಂತರ ಕಾರ್ಯಕ್ರಮ ದಿನಾಂಕ 31.07.2024ರಂದು ನೆರವೇರಿತು. ಸಮಾರಂಭದ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯರು ಶಾಲೆಗೆ, ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಸ್ಟೀಲ್ ಬಟ್ಟಲು ಮತ್ತು ಲೋಟೆಗಳನ್ನು ಹಸ್ತಾಂತರಿಸಿ, ಅಂದು ನಮ್ಮ ಬೆಳ್ಳಂಪಳ್ಳಿ ಶಾಖೆಯ ಉದ್ಘಾಟನಾ ಸಂದರ್ಭ ಕಾರ್ಯಕ್ರಮ ನೆರವೇರಿಸಲು ಸ್ಥಳಾವಕಾಶ ನೀಡಿದ ಈ ಶಾಲೆಗೆ ಇಂದು ಅಗತ್ಯ ವಸ್ತುಗಳನ್ನು ನೀಡುವ ಅವಕಾಶ ದೊರೆತಿರುವುದು ನಮಗೂ ನಮ್ಮ ಸಂಸ್ಥೆಗೂ ಹೆಮ್ಮೆಯ ವಿಷಯ ಎಂದು ಹೇಳಿ, ಮಕ್ಕಳಿಗೆ ಕಥೆ ಹೇಳುವುದರ ಮೂಲಕ ಜೀವನ ಪಾಠ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಗೋಪಾಲ ಆಚಾರ್ಯ ಕೀಳಿಂಜೆ, ಅಧ್ಯಕ್ಷರು, ವಿಶ್ವಕರ್ಮ ಸಮಾಜೋದ್ದಾರಕ ಸಂಘ ಹಾವಂಜೆ - ಬೆಳ್ಳಂಪಳ್ಳಿ - ಕುಕ್ಕೆಹಳ್ಳಿ, ಶ್ರೀ ಗೋವಿಂದರಾಜ್ ಹೆಗ್ಡೆ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬೆಳ್ಳಂಪಳ್ಳಿ- ಕುಕ್ಕಿಕಟ್ಟೆ, ಶ್ರೀ ನಾಗರಾಜ ಪ್ರಭು ಬಿ, ನಿವೃತ್ತ ಹಿರಿಯ ಶಾಖಾ ವ್ಯವಸ್ಥಾಪಕರು, ಪೆರ್ಡೂರು ಶಾಖೆ, ಶ್ರೀ ಬಿ ಹರೀಶ್ ಹೆಗ್ಡೆ, ಶಾಲಾ ಸಂಚಾಲಕರು, ಜೈ ಹಿಂದ್ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಂಪಳ್ಳಿ, ಶ್ರೀ ಸುಭಾಷ್ ನಾಯಕ್, ಮುಖ್ಯೋಪಾಧ್ಯಾಯರು, ಜೈ ಹಿಂದ್ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಂಪಳ್ಳಿ ವೇದಿಕೆಯಲ್ಲಿದ್ದರು. ಶಾಲೆಯ ಸಂಚಾಲಕರಾದ ಶ್ರೀ ಬಿ ಹರೀಶ್ ಹೆಗ್ಡೆರವರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಸುಭಾಷ್ ನಾಯಕ್ ರವರು ತಮ್ಮ ಶಾಲೆಯನ್ನು ಗುರುತಿಸಿ ಅಗತ್ಯ ವಸ್ತುಗಳನ್ನು ನೀಡಿದ ಸಲುವಾಗಿ ನಮ್ಮ ಸಂಸ್ಥೆಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು, ಶಾಲೆಯ ಅಧ್ಯಾಪಕಿ ಶ್ರೀಮತಿ ಮಲ್ಲಿಕಾ ಇವರು ಮಕ್ಕಳು ದೇವರ ಸಮಾನ ಆದ್ದರಿಂದ ಇಂದು ತಾವು ನೀಡಿದ ಅಗತ್ಯ ವಸ್ತುಗಳು ದೇವರಿಗೆ ಸಮರ್ಪಣೆ ಆದಂತೆ ಎಂದು ಮನತುಂಬಿ ನುಡಿದು ನಮ್ಮ ಸಂಸ್ಥೆಯನ್ನು ಹರಸಿದರು. ನಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಪ್ರಶಂಸಿಸಿ ಸಂಸ್ಥೆ ಇನ್ನಷ್ಟು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುವಂತಹ ಶಕ್ತಿಯನ್ನು ಭಗವಂತ ಸಂಸ್ಥೆಗೂ, ಆಡಳಿತ ಮಂಡಳಿ ಹಾಗೂ ಎಲ್ಲಾ ಸಿಬ್ಬಂದಿಗಳಿಗೂ ಅನುಗ್ರಹಿಸಲಿ ಎಂದು ಶುಭಹಾರೈಸಿದರು. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘದವರು ಮಾಡಿದರು ಹಾಗೂ ಸಂಜೆಯ ಉಪಹಾರದ ವ್ಯವಸ್ಥೆಯನ್ನು ನಮ್ಮ ಸಂಸ್ಥೆಯ ವತಿಯಿಂದ ಮಾಡಲಾಯಿತು. ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಇವರು ಸಂಸ್ಥೆಯ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಶ್ರೀ ಕೆ. ಯಜ್ಞೇಶ್ವರ ಆಚಾರ್ಯ, ಶ್ರೀ ವೈ.ವಿ. ವಿಶ್ವಜ್ಞಮೂರ್ತಿ, ಶ್ರೀ ಕೆ.ಶಶಿಕಾಂತ ಆಚಾರ್ಯ, ಉಡುಪಿ ಶಾಖೆಯ ಶಾಖಾವ್ಯವಸ್ಥಾಪಕರಾದ ಶ್ರೀ ಬಿ. ಲಕ್ಷ್ಮೀನಾರಾಯಣ ಆಚಾರ್ಯ, ಮಾರಾಟಾಧಿಕಾರಿ ಶ್ರೀ ಜಯಪ್ರಕಾಶ್ ಬಿ. ಎಸ್, ನಿವೃತ್ತ ಸಿಬ್ಬಂದಿಗಳಾದ ಶ್ರೀ ಸುರೇಶ್ ಬಿ, ಶ್ರೀ ಉಪೇಂದ್ರ ಆಚಾರ್ಯ ಬಿ., ಶ್ರೀ ಗಂಗಾಧರ ಕೆ.ಬಿ., ಶ್ರೀ ರತ್ನಾಕರ ಆಚಾರ್ಯ, ಶ್ರೀಮತಿ ರಜನಿ ಆರ್ ರಾವ್, ಶ್ರೀಮತಿ ವಿನೋದ ಎಸ್ ಆಚಾರ್ಯ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದು, ಬೆಳ್ಳಂಪಳ್ಳಿ ಶಾಖೆಯ ಪ್ರಭಾರ ಶಾಖಾ ವ್ಯವಸ್ಥಾಪಕರಾದ ಶ್ರೀ ಮೋಹನದಾಸ ಆಚಾರ್ಯ ಟಿ ಬಿ ಇವರ ಕಾರ್ಯಕ್ರಮ ನಿರೂಪಿಸಿ, ಕಿರಿಯ ಸಹಾಯಕರಾದ ಶ್ರೀ ಸುಧೀರ್ ಕುಮಾರ್ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ.., ಮಂಗಳೂರು. ಇದರ *ವಜ್ರಮಹೋತ್ಸವ ಸಂಭ್ರಮಾಚರಣೆ 2024* ಪ್ರಯುಕ್ತ ''ಹೊಸಬೆಳಕು ಸೇವಾ ಟ್ರಸ್ಟ್ ಬೈಲೂರು ಇದರ ಆಶ್ರಮ ವಾಸಿಗಳಿಗೆ ನೆರವು ಕಾರ್ಯಕ್ರಮ ಇಂದು ಹೊಸಬೆಳಕು ಸೇವಾ ಟ್ರಸ್ಟ್ ಇದರ ಸಭಾಂಗಣದಲ್ಲಿ ನೆರವೇರಿತು.ಸಮಾರಂಭದ ಅಧ್ಯಕರಾದ ಶ್ರೀ ಪಿ.ಉಪೇಂದ್ರ ಆಚಾರ್ಯರು 1300ವ್ಯಾಟ್ಸ್ ಪ್ರಿಸ್ಟೇಜ್ ಮಿಕ್ಸಿ, 25 ನೀಲ್ ಕಮಲ್ ಚೇಯರ್, 25 ತಲೆದಿಂಬು, 50ಕಿ.ಲೋ. ಅಕ್ಕಿ ಮತ್ತು ಅಡುಗೆ ಸಾಮಾನು ಹಸ್ತಾಂತರಿಸಿ, ಇವತ್ತಿನ ಕಾರ್ಯಕ್ರಮದಲ್ಲಿ ಆಶ್ರಮ ವಾಸಿಗಳಿಗೆ ನೆರವು ನೀಡಿರುವುದು ಸಂಸ್ಥೆಯ ''ಸ್ಥಾಪಕಧ್ಯಕ್ಷರಾದ ದಿವಂಗತ ಪಾಲ್ಕೆ ಬಾಬುರಾಯ ಆಚಾರ್'' ಇವರ ಆತ್ಮಕ್ಕೆ ಖುಷಿ ಆಗಿರಬಹುದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಶ್ರೀ ಹರಿನಾರಾಯಣ ಭಂಡಿ ಪೆರ್ಡೂರು, ನಿವೃತ್ತ ಮುಖ್ಯೋಪಾಧ್ಯಯರು, ಈ ಸೇವಾಶ್ರಮದ ಕಾರ್ಯವೈಖರಿಯನ್ನು ಶ್ಲಾಘಿಸಿ, ಪೆರ್ಡೂರು ಶ್ರೀ ಅನಂತಪದ್ಮನಾಭನ ದಯೆ ಈ ಆಶ್ರಮಕ್ಕೆ ಇರಲಿ, ಎಲ್ಲರೂ ಆರೋಗ್ಯವಂತರಾಗಿ ಇರಲಿ ಎಂದು ಶುಭಹಾರೈಸಿದರು. ಸಂಸ್ಥಾಪಕರಾದ ಶ್ರೀಮತಿ ತನುಜಾ ತರುಣ್ ಇವರು ಮಾತನಾಡಿ ಕಳೆದ ಸುಮಾರು ಹತ್ತು ವರ್ಷಗಳಿಂದ ಇದರ ನಿರ್ವಹಣೆ, ಸಾಧನೆಯನ್ನು ವಿವರಿಸಿದರು. ನಮ್ಮ ಸಂಸ್ಥೆಯಿಂದ ಈ ರೀತಿಯ ಒಂದು ದೊಡ್ಡ ನೆರವನ್ನು ನಾವು ಆಲೋಚನೆ ಮಾಡ್ಲಿಲ್ಲ ಎಂದು ಅಭಿಪ್ರಾಯಪಟ್ಟು ಸಂಸ್ಥೆ ಇನ್ನಷ್ಟು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುವಂತಹ ಶಕ್ತಿಯನ್ನು ಭಗವಂತ ಸಂಸ್ಥೆಗೂ, ಆಡಳಿತ ಮಂಡಳಿ ಹಾಗೂ ಎಲ್ಲಾ ಸಿಬ್ಬಂದಿಗಳಿಗೂ ಅನುಗ್ರಹಿಸಲಿ ಎಂದು ಶುಭಹಾರೈಸಿದರು. 180 ಆಶ್ರಮದ ನಿರಾಶ್ರಿತರಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು. ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಇವರು ಸಂಸ್ಥೆಯ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಶ್ರೀ ಕೆ.ಯಜ್ಞೇಶ್ವರ ಆಚಾರ್ಯ ಕುತ್ಯಾರು, ಶ್ರೀ ಪ್ರಕಾಶ ಆಚಾರ್ಯ ಕುಂಟಾಡಿ, ಉಡುಪಿ ಶಾಖಾವ್ಯವಸ್ಥಾಪಕರಾದ ಶ್ರೀ ಬಿ. ಲಕ್ಷ್ಮೀನಾರಾಯಣ ಆಚಾರ್ಯ, ಮಾರಾಟಧಿಕಾರಿ ಶ್ರೀ ಜಯಪ್ರಕಾಶ್ ಬಿ. ಎಸ್, ಸಿಬ್ಬಂದಿ ಶ್ರೀಮತಿ ಸಹನಾ ಎ. ಆಡಳಿತ ಕಛೇರಿ, ಶ್ರೀ ಪ್ರಶಾಂತ ಕುಮಾರ್ ಮೂಡಬಿದಿರೆ ಶಾಖೆ, ಶ್ರೀ ಚಂದ್ರಮೋಹನ್ ಪಡುಬಿದ್ರೆ ಶಾಖೆ, ಶ್ರೀಮತಿ ರಮಾಶ್ರೀ ಕಿನ್ನಿಗೋಳಿ ಶಾಖೆ, ಪೆರ್ಡೂರು ಶಾಖಾ ಸಿಬ್ಬಂದಿಗಳಾದ ಶ್ರೀಮತಿ ಸವಿತಾ, ಶ್ರೀ ಸಂದೇಶ್, ಶ್ರೀ ಸಂಜಯ್ ಹಾಗೂ ನಿವೃತ್ತ ಶಾಖಾ ವ್ಯವಸ್ಥಾಪಕರಾದ ಶ್ರೀ ಬಿ. ನಾಗರಾಜ ಪ್ರಭು ಪೆರ್ಡೂರು, ಮತ್ತು ನಿವೃತ್ತ ಹಿರಿಯ ಸಹಾಯಕಿ ಶ್ರೀಮತಿ ರಜನಿ ಆರ್ ರಾವ್*, ಜನತಾನಿಧಿ ಸಂಗ್ರಹಕರಾದ ಶ್ರೀ ಹರೀಶ್ ಕುಲಾಲ್, ಶ್ರೀಮತಿ ವಾಣಿ, ಶ್ರೀ ರವಿರಾಜ್ ಆಚಾರ್ಯ, ಸರಾಫರಾದ ಶ್ರೀ ಮಹೇಶ ಆಚಾರ್ಯ, ಸದಸ್ಯರಾದ ಶ್ರೀ ಪ್ರಸನ್ನ ಪ್ರಭು ಇವರು ಉಪಸ್ಥಿತರಿದ್ದು, ಕುಮಾರಿ ಸುಶ್ಮಿತಾ ಇವರ ಕಾರ್ಯಕ್ರಮ ನಿರೂಪಣೆ, ಪೆರ್ಡೂರು ಶಾಖಾವ್ಯವಸ್ಥಾಪಕರಾದ ಶ್ರೀ ನವೀನ್ ಕುಮಾರ್ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಎಸ್. ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ.,ಮಂಗಳೂರು ಇದರ ವಜ್ರ ಮಹೋತ್ಸವದ ಪ್ರಯುಕ್ತ ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಇದರ ಸಹಭಾಗಿತ್ವದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವು ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯರ ಅಧ್ಯಕ್ಷತೆಯಲ್ಲಿ ಜರಗಿತು. ಹಾಗೂ ನಾವು ಮಾಡುವ ಚಟುವಟಿಕೆಗಳು ಜನರ ಮನಸ್ಸನ್ನು ಮುಟ್ಟಬೇಕು ಮತ್ತು ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕು ಎಂದು ತಿಳಿಸಿದರು. ಶಿಬಿರದ ಉದ್ಘಾಟನೆಯನ್ನು ಹಿರಿಯ ಅಂಚೆ ಅಧೀಕ್ಷಕರು ಹಾಗೂ ಅಂಚೆ ಜನ ಸಂಪರ್ಕ ಅಭಿಯಾನದ ಅಧ್ಯಕ್ಷರಾದ ಶ್ರೀ ಎಂ. ಸುಧಾಕರ ಮಲ್ಯ ನೆರವೇರಿಸಿದರು. ಒಂದು ಸಂಸ್ಥೆ ಅರವತ್ತು ವರ್ಷ ಆಚರಿಸಬೇಕಾದರೆ ಅದು ಯಾವುದೇ ಸಾಧನೆಗೆ ಕಡಿಮೆ ಇಲ್ಲ ಸಹಕಾರದ ತತ್ವ ಇಂದಿನ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿದೆ ಸಂಸ್ಥೆಯ ಕೀರ್ತಿ ಇನ್ನೂ ಎತ್ತರಕ್ಕೆ ಏರಲಿ ಎಂದು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿದ್ದ ಶ್ರೀ ಎಂ. ಪುರುಷೋತ್ತಮ್ ಭಟ್ ವಕೀಲರು ಮತ್ತು ನೋಟರಿ ಹಾಗೂ ಅಧ್ಯಕ್ಷರು ದ. ಕ. ಕೇಂದ್ರ ಸಹಕಾರಿ ಸಗಟು ಮಾರಾಟ ಸಂಘ ನಿಯಮಿತ, ಜನತಾ ಬಜಾರ್, ಮಂಗಳೂರು ಇವರು ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಸಹಕಾರಿ ಸಂಸ್ಥೆ ಪೈಪೋಟಿ ನಡೆಸಿ ಲಾಭ ಗಳಿಸುತ್ತಿರುವುದು ಹೆಮ್ಮೆಯ ಸಂಗತಿ ಆಡಳಿತ ಮಂಡಳಿಯ ಇಚ್ಛಾಶಕ್ತಿಯಿಂದಾಗಿ ಸಾರ್ವಜನಿಕರಿಗೆ ಸಹಾಯಕವಾಗುವ ಚಟುವಟಿಕೆಗಳನ್ನು ಮಾಡುತ್ತಿದೆ ಜೊತೆಗೆ ಕಷ್ಟಕಾಲದಲ್ಲಿ ಸದಸ್ಯರನ್ನು ಮೇಲಕ್ಕೆ ಎತ್ತುವ ಕೆಲಸಗಳನ್ನು ಕೂಡ ಮಾಡುತ್ತಿದೆ ಎಂದು ತಿಳಿಸಿದರು. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಉದಯ ಜಿ. ಆಚಾರ್ಯ ಸಂಸ್ಥೆಯನ್ನು 60 ವರ್ಷಗಳ ಕಾಲ ನಡೆಸಿ ಬೆಳೆಸುವುದು ದೊಡ್ಡ ಸಾಧನೆ ಸಿಬ್ಬಂದಿಯವರಲ್ಲಿ ಕಾರ್ಯ ದಕ್ಷತೆ, ಶ್ರಮತೆಯಿದೆ ಎಂದು ತಿಳಿಸಿದರು. ಉಪ ಅಂಚೆ ಕಚೇರಿ ಅಧೀಕ್ಷಕರಾದ ಶ್ರೀ ದಿನೇಶ್ ಪಿ. ಅಂಚೆ ಜನ ಸಂಪರ್ಕ ಅಭಿಯಾನದಡಿಯಲ್ಲಿ ಹಲವಾರು ಆರ್ಥಿಕ ಸವಲತ್ತುಗಳು ಇವೆ ಎಂದು ತಿಳಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಎ. ಆನಂದ ಆಚಾರ್ಯ, ಶ್ರೀ ಕೆ. ಯಜ್ಞೇಶ್ವರ ಆಚಾರ್ಯ, ಶ್ರೀ ವಿ. ಜಯ ಆಚಾರ್ಯ, ಶ್ರೀ ಕೆ ಶಶಿಕಾಂತ ಆಚಾರ್ಯ, ಶ್ರೀ ಕೆ ಪ್ರಕಾಶ್ ಆಚಾರ್ಯ, ಶ್ರೀ ಮಲ್ಲಪ್ಪ ಎನ್. ಪತ್ತಾರ್, ಶ್ರೀಮತಿ ರೋಹಿಣಿ ಎಂ. ಪಿ. ಉಪಸ್ಥಿತರಿದ್ದರು. ನಿರ್ದೇಶಕರಾದ ಶ್ರೀ ಕೆ. ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಶ್ರೀ ಕೆ. ಯಜ್ಞೇಶ್ವರ ಆಚಾರ್ಯ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಸಹನಾ ಎ. ಪ್ರಾರ್ಥನೆಗೈದರು. ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು
ವಜ್ರಮಹೋತ್ಸವ ವರ್ಷ 2024 ಆಚರಿಸುತ್ತಿರುವ ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇವರಿಂದ ವೈದ್ಯರ ದಿನಾಚರಣೆಯಂದು ಅಭಿನಂದನೆ.
ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಆಚರಣೆ ಪ್ರಯುಕ್ತ ದಿನಾಂಕ:01-07-2024 "ವೈದ್ಯರ ದಿನಾಚರಣೆ" ಯಂದು ನಿರಂತರ 25 ವರ್ಷಕ್ಕೂ ಹೆಚ್ಚು ಸೇವೆಗೈದ 6 ಜನ ವೈದ್ಯರಿಗೆ ನಮ್ಮ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯರ ಅಭಿಲಾಷೆಯಂತೆ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ವಿ. ಜಯ ಆಚಾರ್, ಶ್ರೀ ಕೆ. ಶಶಿಕಾಂತ್ ಆಚಾರ್ಯ, ಶ್ರೀ ಕೆ. ಪ್ರಕಾಶ ಆಚಾರ್ಯ ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಹಾಗೂ ಸಿಬ್ಬಂದಿಯವರು ಅವರನ್ನು ಭೇಟಿಮಾಡಿ ಗೌರವ ಅಭಿನಂದನೆಯನ್ನು ಸಲ್ಲಿಸಿರುವುದು.
ಡಾ| ಅಶೋಕ್ ಕುಮಾರ್ ಭಟ್ (MBBS) 43 ವರ್ಷಗಳ ವೈದ್ಯಕೀಯ ಸೇವೆ, ಡಾ| ನಿಶಿತ್ ಕುಮಾರ್ ಎನ್ (MBBS) 47 ವರ್ಷಗಳ ವೈದ್ಯಕೀಯ ಸೇವೆ, ಡಾ| ಗೀತಾ ವಿ ಶೆಣೈ (MBBS, DCH) 46 ವರ್ಷಗಳ ವೈದ್ಯಕೀಯ ಸೇವೆ, ಡಾ| ಪಿ ವಿ ಶೆಣೈ (MBBS) 45 ವರ್ಷಗಳ ವೈದ್ಯಕೀಯ ಸೇವೆ, ಡಾ| ಪದ್ಮನಾಭ ಕಾಮತ್ (MD, DM)( Cardio) Interventional Cardiologist 25 ವರ್ಷಗಳ ವೈದ್ಯಕೀಯ ಸೇವೆ, ಡಾ| ಮನೋಹರ್ ಆಚಾರ್ (MBBS, MD) 30 ವರ್ಷಗಳಿಂದ ವೈದ್ಯಕೀಯ ಸೇವೆ ಸೇವೆಸಲ್ಲಿಸುತ್ತಿದ್ದಾರೆ.
ವಜ್ರಮಹೋತ್ಸವ ವರ್ಷ 2024 ಆಚರಿಸುತ್ತಿರುವ ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇವರಿಂದ ಬೃಹತ್ ರಕ್ತದಾನ ಶಿಬಿರ: 44 ಯುನಿಟ್ ರಕ್ತ ಸಂಗ್ರಹ
ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಆಚರಣೆ ಪ್ರಯುಕ್ತ ದಿನಾಂಕ:30.06.2024 ರಂದು ಜರಗಿದ ರಕ್ತದಾನ ಶಿಬಿರದಲ್ಲಿ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರಾದಶ್ರೀ ಪಿ. ಉಪೇಂದ್ರ ಆಚಾರ್ಯರು ಅಧ್ಯಕ್ಷತೆಯನ್ನು ವಹಿಸಿದ್ದರು.ರಕ್ತದಾನ ಶಿಬಿರದ ಉದ್ಘಾಟನೆಯನ್ನು ಡಾ|| ಪೃಥ್ವಿ ನೆರವೇರಿಸಿದರು.ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ, ದಾನ ಅನ್ನುವಂತಹದು ದೇವರ ಸೇವೆಗೆ ಸಮಾನ ಎಂದು ಮುಖ್ಯ ಅಥಿತಿಗಳಾಗಿದ್ದ ಶ್ರೀ ಆನೆಗುಂದಿ ಗುರು ಸೇವಾ ಪರಿಷತ್ ಮಹಾಮಂಡಲ ಮಂಗಳೂರು ಇದರ ಅಧ್ಯಕ್ಷರಾದ ಎಂ. ಶೇಖರ ಆಚಾರ್ಯ ತಿಳಿಸಿದರು, ರಕ್ತದಾನಕ್ಕೆ ಇನ್ನೊಂದು ಜೀವವನ್ನು ಬದುಕಿಸಿಕೊಡುವ ಶಕ್ತಿ ಇದೆ ಎಂದು ವಿಶ್ವಕರ್ಮ ಯುವ ವೇದಿಕೆ ರಿ. ಮಂಗಳೂರು ಇದರ ಅಧ್ಯಕ್ಷರಾದ ಭರತ್ ನಿಡ್ಪಳ್ಳಿ ತಿಳಿಸಿದರು, ಆಥಿರ್üಕ ಸಹಕಾರ ಸಂಸ್ಥೆಗಳು ರಕ್ತದಾನ ದಂತಹ ಶಿಬಿರಗಳನ್ನು ಮಾಡುವುದು ತುಂಬಾ ಕಡಿಮೆ ಆದರೆ ಈ ಸಂಸ್ಥೆ ಇಂತಹ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ವಿಶ್ವಕರ್ಮಯುವ ಮಿಲನ ರಿ. ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ವಿಕ್ರಮ್ ಐ. ಆಚಾರ್ಯರು ವಾಚಿಸಿದರು,ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಇದರ ಅಧ್ಯಕ್ಷರಾದ ಜೆ. ವಿವೇಕ ಆಚಾರ್ಯ ಉಪಸ್ಥಿತರಿದ್ದರು.ಸಂಸ್ಥೆಯ ಉಪಾಧ್ಯಕ್ಷರಾದ ಎ. ಆನಂದ ಆಚಾರ್ಯ, ನಿರ್ದೇಶಕರುಗಳಾದ ಕೆ. ಯಜ್ಞೇಶ್ವರ ಆಚಾರ್ಯ, ವೈ.ವಿ.ವಿಶ್ವಜ್ಞಮುರ್ತಿ, ವಿ.ಜಯ ಆಚಾರ್ಯ, ಕೆ. ಶಶಿಕಾಂತ ಆಚಾರ್ಯ, ಪ್ರಕಾಶ ಆಚಾರ್ಯ ಕೆ., ಮಲ್ಲಪ್ಪ ಎನ್. ಪತ್ತಾರ್, ಶ್ರೀಮತಿ ರೋಹಿಣಿ ಎಂ.ಪಿ., ಶ್ರೀಮತಿ ಜ್ಯೋತಿ ಎಂ.ವಿ. ಉಪಸ್ಥಿತರಿದ್ದರು.ನಿರ್ದೇಶಕರಾದ ಶ್ರೀ ವೈ.ವಿ. ವಿಶ್ವಜ್ಞಮೂರ್ತಿ ಪ್ರಾರ್ಥನೆಗೈದರು. ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.ವೆನ್ಲಾಕ್ ಬ್ಲಡ್ ಬ್ಯಾಂಕಿನ ಮೇಲ್ವಿಚಾರಕರಾದ ಆಂಥೋನಿ ಡಿ’ಸೋಜ ರಕ್ತದಾನದ ಮಾಹಿತಿಯನ್ನು ನೀಡಿದರು.ವೆನ್ಲಾಕ್ ಆಸ್ಪತ್ರೆಯ ತಂಡ ರಕ್ತದಾನ ಶಿಬಿರವನ್ನು ನೆರವೇರಿಸಿ ಕೊಟ್ಟರು.59 ಮಂದಿ ರಕ್ತದಾನ ಮಾಡಲು ಬಂದಿದ್ದು, 44 ಯುನಿಟ್ ರಕ್ತ ಸಂಗ್ರಹಿಸಲಾಗಿದೆ.ಶಾಖಾವ್ಯವಸ್ಥಾಪಕರಾದ ಕಿಶೋರ್ ಕೆ ಇವರು ಸ್ವಾಗತಿಸಿದರು.ಲೆಕ್ಕಾಧಿಕಾರಿ ಶ್ರೀಮತಿ ಉಷಾ ಮನೋಜ್ ಇವರು ಧನ್ಯವಾದ ಸಮರ್ಪಿಸಿದರು, ಸಿಬ್ಬಂದಿ ಶ್ರೀಕಾಂತ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ವಜ್ರಮಹೋತ್ಸವ ವರ್ಷ 2024 ಆಚರಿಸುತ್ತಿರುವ ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇವರ ವತಿಯಿಂದ ಸರ್ಕಾರಿ ಶಾಲೆ ವಿದ್ಯಾಥಿಗಳಿಗೆ ಉಚಿತ ಪಠ್ಯಪುಸ್ತಕ ಪರಿಕರಗಳ ವಿತರಣೆ
ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇವರ ವತಿಯಿಂದ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ (ರಿ.) ಉಪ್ಪೂರು, ತೆಂಕಬೆಟ್ಟು ಇದರ ಆಶ್ರಯದಲ್ಲಿ ದಿನಾಂಕ: 23.06.2024 ರಂದು ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಉಪ್ಪೂರ್ ನ ಸಭಾಂಗಣದಲ್ಲಿ ಸುಮಾರು 40 ಕ್ಕೂ ಅಧಿಕ ವಿದ್ಯಾಥಿ -ವಿದ್ಯಾಥಿರ್ನಿಯರಿಗೆ ಉಚಿತ ಪಠ್ಯ ಪುಸ್ತಕ ಪರಿಕರಗಳ ವಿತರಣಾ ಸಮಾರಂಭವು ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯರ ಅಧ್ಯಕ್ಷತೆಯಲ್ಲಿ ಜರಗಿತು. ಅಧ್ಯಕ್ಷೀಯ ಮಾತುಗಳನ್ನಾಡಿ, ದಾನಗಳಲ್ಲಿ ಶ್ರೇಷ್ಠದಾನ ಅನ್ನದಾನ ಎಂದು ಹೇಳುತ್ತೇವೆ. ಊಟ ಮಾಡಿದರೆ ಒಂದು ಹೊತ್ತಿನ ಹಸಿವು ನೀಗುತ್ತದೆ ಆದರೆ, ವಿದ್ಯಾದಾನ ಎನ್ನುವಂತದ್ದು ಬದುಕಿನ ಕಟ್ಟಕಡೆಯವರೆಗೆ ಸಹಕಾರಿಯಾಗುತ್ತದೆ. ಅಂತಹ ವಿಶೇಷ ಸೇವೆಯನ್ನು ಮಾಡುತ್ತಿರುವ ಉಪ್ಪೂರು, ತೆಂಕಬೆಟ್ಟುವಿನ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಆಚಾರ್ಯ ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆಂದು ತಿಳಿಸಿದರು.
ಈ ಸಂದರ್ಭ ನಮ್ಮ ಸಂಸ್ಥೆಯ ನಿರ್ದೇಶಕರಾದ ಶ್ರೀ ಕೆ. ಯಜ್ಞೇಶ್ವರ ಆಚಾರ್ಯ, ಶ್ರೀ ವೈ.ವಿ. ವಿಶ್ವಜ್ಞಮೂರ್ತಿ, ಶ್ರೀ ಕೆ. ಶಶಿಕಾಂತ್ ಆಚಾರ್ಯ, ಪ್ರಧಾನವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ, ಗೌರವ ಸಲಹೆಗಾರರಾದ ಶ್ರೀ ಧನಂಜಯ ಆಚಾರ್ಯ, ಕಾಳಿಕಾಂಬಾ ಮಹಿಳಾ ಬಳಗದ ಅಧ್ಯಕ್ಷರಾದ ಸಾವಿತ್ರಿ ಲಕ್ಷ್ಮಣ ಆಚಾರ್ಯ ಉಪಸ್ಥಿತರಿದ್ದರು. ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಆಚಾರ್ಯ ಬಡ ವಿದ್ಯಾಥಿಗಳಿಗೆ ಪಠ್ಯಪುಸ್ತಕ ಉಚಿತವಾಗಿ ನೀಡಿದ ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು ಹಾಗೂ ಇನ್ನು ಮುಂದೆಯೂ ಸಮಾಜಮುಖಿ ಕಾರ್ಯಕ್ರಮ ಮಾಡುವುದರೊಂದಿಗೆ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು. ಉಪಾಧ್ಯಕ್ಷರಾದ ಹರೀಶ್ ಆಚಾರ್ಯ ಉಗ್ಗೇಲ್‍ಬೆಟ್ಟು ಎಲ್ಲರನ್ನು ಸ್ವಾಗತಿಸಿದರು. ವಂದನಾರ್ಪಣೆ ಮತ್ತು ಕಾರ್ಯಕ್ರಮ ನಿರೂಪಣೆಯನ್ನು ಕಾರ್ಯದರ್ಶಿಯವರಾದ ಸುಬ್ರಹ್ಮಣ್ಯ ಆಚಾರ್ಯ ನೆರವೇರಿಸಿದರು.
ವಜ್ರಮಹೋತ್ಸವ ವರ್ಷ 2024 ಆಚರಿಸುತ್ತಿರುವ ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇವರಿಂದ ವಿಶ್ವ ಯೋಗ ದಿನಾಚರಣೆ
ದಿನಾಂಕ:17.06.2024 ರಂದು ಆಡಳಿತ ಕಛೇರಿಯಲ್ಲಿ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ವಜ್ರಮಹೋತ್ಸವ ಸಂಭ್ರಮಾಚರಣೆ 2024 ರ ಪ್ರಯುಕ್ತ ವಿಶ್ವ ಯೋಗ ದಿನಾಚರಣೆಯು ಜರಗಿತು. ತರಬೇತುದಾರರಾದ ಶ್ರೀ ಉಮೇಶ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಮಂಗಳೂರು ಇವರು ನಡೆಸಿ ಕೊಟ್ಟರು, ಇವರೊಂದಿಗೆ ಶ್ರೀ ಲೋಕೇಶ್ ಆಚಾರ್ಯ, ಶ್ರೀಮತಿ ಜಯಂತಿ ಲೋಕೇಶ್ ಹಾಗೂ ಶ್ರೀ ನಾಗೇಶ್ ಆಚಾರ್ಯರು ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀ ವೈ.ವಿ. ವಿಶ್ವಜ್ಞಮೂರ್ತಿ, ಶ್ರೀ ವಿ. ಜಯ ಆಚಾರ್. ಶ್ರೀ ಕೆ. ಶಶಿಕಾಂತ್ ಆಚಾರ್ಯ ಮತ್ತು ಶ್ರೀ ಮಲ್ಲಪ್ಪ ಎನ್. ಪತ್ತಾರ್, ಪ್ರಧಾನವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ, ಬೈಕಾಡಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ರತ್ನಾವತಿ ಜೆ. ಬೈಕಾಡಿ, ಗುರುಪ್ರಸಾದ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ಜನತಾ ನಿಧಿ ಸಂಗ್ರಾಹಕರು ಭಾಗವಹಿಸಿದರು.
ಬೈಕಾಡಿ ಕಲಾ ಶಿಬಿರ-2024 ಸಮಾರೋಪ ಸಮಾರಂಭ
ಬೈಕಾಡಿ ಕಲಾ ಶಿಬಿರ ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿದೆ ಇಂತಹ ಶಿಬಿರಗಳನ್ನು ಆಯೋಜಿಸಿ, ಸಮಾಜವನ್ನು ಕಟ್ಟಿ ಉತ್ಕೃಷ್ಟ ಮಟ್ಟಕ್ಕೆ ಏರಿಸುವಲ್ಲಿ ಕಲಾ ಪರಿಷತ್ತು ಮತ್ತು ಬೈಕಾಡಿ ಪ್ರತಿಷ್ಠಾನ ಒಳ್ಳೆಯ ಆಯೋಜನೆ ಮಾಡಿದೆ ಎಂದು ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯ ಸಮಾರೋಪ ನುಡಿಗಳನ್ನಾಡಿದರು. ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಮತ್ತು ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೈಕಾಡಿ ಕಲಾ ಶಿಬಿರ-2024 ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿದ ವಿಶ್ವಕರ್ಮ ಕಲಾ ಪರಿಷತ್ ಅಧ್ಯಕ್ಷರಾದ ಡಾಕ್ಟರ್ ಎಸ್.ಪಿ. ಗುರುದಾಸ್ ಬೈಕಾಡಿ ಕಲಾ ಶಿಬಿರ ಎಲ್ಲರ ಸಹಕಾರದಿಂದ ಕಲಾಪರಿಷತ್ ಸದಸ್ಯರುಗಳಿಂದ ಮತ್ತು ಶಿಬಿರಾಥಿಗಳಿಂದ ಯಶಸ್ವಿಯಾಗಿ ಜರಗಿದೆ ಇವರೆಲ್ಲರಿಗೂ ನನ್ನ ವಂದನೆಗಳು ಹಾಗೂ ಬೈಕಾಡಿ ಮಾಸ್ಟರ್ ಈ ಹಿಂದೆ ಸಂಘಟಿಸಿದ ಅನೇಕ ಕ್ಲಿಷ್ಟಕರ ಪರಿಸ್ಥಿತಿಗಳ ಶಿಬಿರಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಮುಖ್ಯ ಅತಿಥಿಯಾಗಿ ಮೋಹನ್ ಕುಮಾರ್ ಬೆಳ್ಳೂರು ಗೌರವಾಧ್ಯಕ್ಷರು ಆನೆಗುಂದಿ ಸರಸ್ವತಿ ಎಜುಕೇಶನ್ ಟ್ರಸ್ಟ್ ಪಡುಕುತ್ಯಾರು ಬೈಕಾಡಿಯವರು ನಡೆಸಿರುವ ಶಿಬಿರದಿಂದಾಗಿ ನಾವು ಈ ವೇದಿಕೆಯಲ್ಲಿ ನಿಂತು ಮಾತಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು. ಅಪಾರ ಐಶ್ವರ್ಯ ಹೊಂದಿದ್ದರೂ, ಸರಳ ಜೀವನ ನಡೆಸಿ ಸಮಾಜಕ್ಕೋಸ್ಕರ ತನ್ನ ಜೀವನವನ್ನೇ ಮುಡಿಪಾಗಿಟ್ಟ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯರನ್ನು ಸ್ಮರಿಸಿಕೊಂಡು ಸಮಾಜದ ಉದ್ಧಾರಕ್ಕೆ ಜನ್ಮ ವೆತ್ತಿ ಬಂದ ಹಲವು ಮಹನೀಯರುಗಳ ಪೈಕಿ ಬೈಕಾಡಿ ಜನಾರ್ದನ ಆಚಾರ್ ಕೂಡ ಒಬ್ಬರು ಎಂದು ಎಸ್.ಕೆ.ಜಿ.ಐ ಸೊಸೈಟಿಯ ನಿರ್ದೇಶಕರಾದ ವಿ. ಜಯ ಆಚಾರ್ ತಿಳಿಸಿದರು. ವಿದ್ಯಾಥಿ ಶಿಬಿರದಲ್ಲಿ ನಾಯಕರು ತಯಾರಾಗುತ್ತಾರೆ ಕಲಾ ಶಿಬಿರದಲ್ಲಿ ಕಲಾವಿದರು ತಯಾರಾಗುತ್ತಾರೆ ಅನ್ನುವ ಮೂಲಕ ಈ ಕಲಾ ಶಿಬಿರದ ವೈಷಿಷ್ಟತೆಯನ್ನು ಸ್ವಾರಸ್ಯಕರ ಮಾತುಗಳ ಮೂಲಕ ಬಣ್ಣಿಸುತ್ತಾ ಗತಕಾಲದಲ್ಲಿ ವಿಶ್ವಕರ್ಮ ಸಮುದಾಯದ ಕಲಾವಿದರು ಮಾಡಿದ ಸಾಧನೆಯನ್ನು ತೆರೆದಿಟ್ಟು ಶಿಬಿರಾಥಿಗಳಿಗೆ ಸ್ಪೂರ್ತಿ ತುಂಬಿದ ಮಾತುಗಳನ್ನು ಮುಖ್ಯ ಅತಿಥಿಯಾಗಿದ್ದ ವಿಶ್ವಕರ್ಮ ಒಕ್ಕೂಟದ ಮಾಜಿ ಕಾರ್ಯದರ್ಶಿ ಮ ಯೋಗೀಶ್ ಮಾತನಾಡಿದರು. ತೆಂಕನಿಡಿಯೂರು ಬಾಲಸಂಸ್ಕಾರ ಕೇಂದ್ರ ಸಂಸ್ಕಾರ ಕೇಂದ್ರ ಸ್ಥಾಪನೆಗೆ ಕಾರಣರಾದ ಬೈಕಾಡಿ ಮಾಸ್ಟರ್ ಅವರ ಸ್ಪೂರ್ತಿಯನ್ನು ಸ್ಮರಿಸಿಕೊಳ್ಳುತ್ತಾ ಪ್ರತಿಫಲದ ಕಿಂಚಿತ್ತು ಅಪೇಕ್ಷೆಯೂ ಇಲ್ಲದೆ ತ್ಯಾಗ ಜೀವನ ನಡೆಸಿದ ಬೈಕಾಡಿ ಮಾಸ್ಟರ್ ಅವರ ಸಮಯ ಪಾಲನೆಯನ್ನು ಕೂಡ ಈ ಸಂದರ್ಭದಲ್ಲಿ ಭಾವುಕರಾಗಿ ಪ್ರದೀಪ ಆಚಾರ್ಯ ಸ್ಮರಿಸಿಕೊಂಡರು. ಗುರಿ ಇಲ್ಲದ ಜೀವನದಲ್ಲಿ ಮುಂದೇನು ಅನ್ನುವಂತೆ ದಾರಿ ಕಾಣದಾಗ ಕಲೆಯ ಗುರಿಯನ್ನು ತೋರಿಸಿ ಜೀವನದ ದಿಕ್ಕನ್ನು ಬದಲಾಯಿಸಿದಂತೆ ಅಪ್ಪ ಬೈಕಾಡಿ ಮಾಸ್ಟರ್ ಅವರನ್ನು ಸ್ಮರಿಸಿಕೊಂಡು ಇಂಜಿನಿಯರ್ ಮತ್ತು ಡಾಕ್ಟರ್ ಅನ್ನುವ ಎರಡೇ ಗುರಿಯಡೆಗೆ ಮುಖ ಮಾಡಿರುವ ವಿದ್ಯಾಥಿಗಳಿಗೆ ಕಲೆಯ ಮೂಲಕವೂ ಅದೇ ಪ್ರಮಾಣದ ಸಂಪಾದನೆ ಮಾಡಬಹುದು ಅನ್ನುವ ಸ್ಪೂರ್ತಿಯ ಮಾತುಗಳನ್ನು ರತ್ನ ಕಲಾ ಲಯದ ನಿರ್ದೇಶಕಿ ಅಕ್ಷತಾ ಬೈಕಾಡಿ ಮಾತನಾಡಿದರು. ಶಿಲ್ಪಿ ಸತೀಶ ಆಚಾರ್ಯ ವಿಜಯ ಶಿಲ್ಪಕಲಾ ಹಾಗೂ ಗೌರವ ಸಲಹೆಗಾರರು ವಿಶ್ವಕರ್ಮ ಕಲಾ ಪರಿಷತ್ ಮತ್ತು ಭರತ್ ರಾಜ್ ಬೈಕಾಡಿ ಗೌರವ ಉಪಸ್ಥಿತರಿದ್ದರು. 2023-24 ನೇ ಸಾಲಿನ ಎಂ.ಕಾಂ. ಪರೀಕ್ಷೆಯಲ್ಲಿ ಶೇಕಡಾ 81.77 ಅಂಕಗಳಿಸಿದ ಕು.ಎಂ.ಪ್ರೀತಿ ಆಚಾರ್ಯ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ರಲ್ಲಿ 620 ಅಂಕ ಗಳಿಸಿದ ಕು. ಶ್ರೀಯಾ ಎಸ್. ಆಚಾರ್ಯ ಹಾಗೂ ಕೊಯಂಬತ್ತೂರಿನಲ್ಲಿ ನಡೆದ ಭಾರತ ಮಟ್ಟದ ಕಲಾ ಪ್ರದರ್ಶನದಲ್ಲಿ ಶ್ರೀಮತಿ ಚಿರಶ್ರೀ ಅಭಿಷೇಕ್ ಪ್ರತಿಷ್ಠಿತ ಬಾರ್ಬರ್ ಶ್ರೀನಿವಾಸನ್ ಸ್ಮಾರಕ ಪ್ರಶಸ್ತಿಗೆ ಭಾಜನರಾಗಿದ್ದುದಕ್ಕಾಗಿ ಅಭಿನಂದಿಸಿ ಗೌರವಿಸಲಾಯಿತು. 57 ಶಿಬಿರಾಥಿಗಳಿಗೆ ಸರ್ಟಿಫಿಕೇಟ್ ಮತ್ತು ಟಿಫನ್ ಬಾಕ್ಸ್ ಮತ್ತು ಪೆನ್ನು ಇರುವ ಕಿಟ್ ನೀಡಲಾಯಿತು. ಕಲಾಪರಿಷತ್ ನ ಗೌರವಾಧ್ಯಕ್ಷರಾದ ಸುಂದರ ಆಚಾರ್ಯ ಬೆಳುವಾಯಿ ಸ್ವಾಗತ ಗೈದರು. ಯಜ್ಞೇಶ್ವರ ಕೃಷ್ಣಾಪುರ ವಂದನಾರ್ಪಣೆ ಗೈದರು ಉದಯ ಭಾಸ್ಕರ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯಿಂದವನಮಹೋತ್ಸವ ಮತ್ತು ಸಸಿ ವಿತರಣೆ
ದಿನಾಂಕ:11.06.2024ರಂದು "ವಿಶ್ವಸೌಧ" ಆಡಳಿತ ಕಛೇರಿ ಸಭಾಂಗಣ, ಕೊಟ್ಟಾರಚೌಕಿಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ ಜರಗಿತು. ನಿರ್ದೇಶಕರಾದ ಶ್ರೀ ವೈ.ವಿ.ವಿಶ್ವಜ್ಞಮುರ್ತಿ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ.ಉಪೇಂದ್ರ ಆಚಾರ್ಯರು ವಹಿಸಿದ್ದರು.ಅಮೂಲ್ಯ ಸಮಯವ್ಯಯಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಎ. ಆನಂದ ಆಚಾರ್ಯರು ಸ್ವಾಗತಿಸಿದರು.
ಸಂಸ್ಥೆಯ ಅಭಿವೃದ್ಧಿ ಬಗ್ಗೆ ಪ್ರಾಸ್ತಾವಿಕವಾಗಿ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಇವರು ಮಾತನಾಡಿದರು.ಮುಖ್ಯ ಅತಿಥಿüಗಳು ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ಸುಮಾರು 465 ಸಸಿ ವಿತರಣೆ ಮಾಡಲಾಯಿತು. ನಿರ್ದೇಶಕರಾದ ಶ್ರೀಮತಿ ರೋಹಿಣಿ ಎಂ.ಪಿ.ಯವರುಪಪ್ಪಾಯ ಹಾಗೂ ರಾಮಫಲ ಬೀಜಗಳನ್ನು ನೀಡಿ ಸಹಕರಿಸಿದರು.ವಲಯ ಅರಣ್ಯಾಧಿಕಾರಿ ಶ್ರೀ ರಾಜೇಶ್ ಬಳಿಗಾರ್, ಪ್ರತೀ ವರ್ಷ ಸಸಿ ವಿತರಿಸುವ ಮೂಲಕ ಪರಿಸರ ಸಂರಕ್ಷಣೆ ವೂಡಿರುವುದಕ್ಕೆ ಶ್ಲಾಘನೆಗೈದರು.ಇದು ಕೇವಲ ಅರಣ್ಯ ಇಲಾಖೆಗೆ ಸಂಬಂಧಿಸದೆ ಎಲ್ಲರಲ್ಲೂ ಗಿಡ ನೆಡುವ ಮನೋಭಾವ ಬೆಳೆಸಬೇಕೆಂದರು.ಶ್ರೀಮತಿ ರೇಣುಕಾ, ತೋಟಗಾರಿಕಾ ಸಹಾಯಕರುಕಾರ್ಯಕ್ರಮದ ಬಗ್ಗೆ ಪ್ರಶಂಸೆ ಗೈದರು.ಕೋಡಿಕಲ್ ವಾರ್ಡ್ ನ ಸದಸ್ಯರಾದ ಶ್ರೀ ಕಿರಣ್‍ಕುಮಾರ್ ಮಾತನಾಡಿ ನಾವು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಿದಾಗ ಮಾತ್ರ ಇತರರಿಗೂ ನೆಡುವಂತೆ ನಿರ್ದೇಶನ ನೀಡಬಹುದು ಎಂದರು.ದ.ಕ. ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷರಾದ ಶ್ರೀ ಕೆ.ಎಲ್. ಹರೀಶ್ ಮಾತನಾಡಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಜವಾಬ್ದಾರಿಯುತ ಕೆಲಸ ಮಾಡಿರುತ್ತೀರಿ ಎಂದರು. ಶ್ರೀ ಜಗದೀಶ್ ಆಚಾರ್ಯ ಕೋಡಿಕಲ್ ಇವರು ಮಾತನಾಡಿ ಸಂಸ್ಥೆಯು ನಡೆಸಿದ ಈ ಸಮಾಜಮುಖಿ ಕೆಲಸಕ್ಕೆ ಶುಭ ಹಾರೈಸಿದರು.
ನಿರ್ದೇಶಕರುಗಳಾದ ಶ್ರೀ ಕೆ.ಯಜ್ಞೇಶ್ವರ ಆಚಾರ್ಯ, ಶ್ರೀ ವಿ.ಜಯ ಆಚಾರ್. ಶ್ರೀ ಕೆ. ಶಶಿಕಾಂತ ಆಚಾರ್ಯ, ಶ್ರೀ ಮಲ್ಲಪ್ಪ ಎನ್. ಪತ್ತಾರ್, ಶ್ರೀಮತಿ ರೋಹಿಣಿ ಎಂ.ಪಿ., ಶ್ರೀಮತಿ ಜ್ಯೋತಿ ಎಂ.ವಿ., ಶ್ರೀ ರಮೇಶ್ ರಾವ್ ಯು., ಶ್ರೀ ಪ್ರಕಾಶ ಆಚಾರ್ಯ ಕೆ., ಶ್ರೀ ಮಂಜುನಾಥ ಆಚಾರ್ಯರು ಮತ್ತು ಶ್ರೀ ಚಂದ್ರಶೇಖರ್‍ಎ.ಎಸ್., ಹಾಗೂ ಸದಸ್ಯ/ಗ್ರಾಹಕರು, ನಿವೃತ್ತ ಸಿಬ್ಬಂದಿಗಳು ಮತ್ತು ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿರ್ದೇಶಕರಾದ ಶ್ರೀ ಕೆ.ಪ್ರಕಾಶ ಆಚಾರ್ಯ ಧನ್ಯವಾದಗೈದರು. ಶ್ರೀಮತಿ ಉಷಾ ಮನೋಜ್ ನಿರೂಪಣೆಗೈದರು.
ವಜ್ರಮಹೋತ್ಸವದ ಲಾಂಛನ ಅನಾವರಣ ಹಾಗೂ ಅಭಿನಂದನೆ ಕಾರ್ಯಕ್ರಮ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪಾಚಾರ್ಯ ಕಲ್ಯಾಣ ಮಂಟಪದಲ್ಲಿ 27.5.2024 ಜರಗಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ಮನೋವೈದ್ಯರು ಹಾಗೂ ಸಾಹಿತಿ ಡಾ|| ಸಿ.ಆರ್.ಚಂದ್ರಶೇಖರ್ ಲಾಂಛನ ಅನಾವರಣ ಗೊಳಿಸಿದರು.
ಇದಕ್ಕೂ ಮೊದಲು ವ್ಯಕ್ತಿತ್ವ ವಿಕಸನದಲ್ಲಿ ಮಾನಸಿಕ ಒತ್ತಡ ನಿರ್ವಹಣೆ ವಿಷಯದ ಕುರಿತು ಸಂವಾದ ನಡೆಸಿದ ಅವರು, ಇಂದು ಅನಗತ್ಯ ಒತ್ತಡದ ಜತೆಗೆ ಜೀವಿಸುವ ಪರಿಸ್ಥಿತಿ ಎದುರಾಗಿದೆ. ಆಹಾರ ಪದ್ಧತಿ, ಒತ್ತಡದ ಜೀವನ ಶೈಲಿಯಿಂದಾಗಿ ವಿವಿಧ ಕಾಯಿಲೆಗಳು ಸುತ್ತಿಕೊಳ್ಳುತ್ತಿವೆ. ಹೃದಯಾಘಾತದ ಸಂಖ್ಯೆ ಶೇ.20ಕ್ಕೆ ಏರಿಕೆಯಾಗಿದೆ. ಹೆಚ್ಚಿನ ಜನ ನೆಮ್ಮದಿ, ಸಮಾಧಾನ ವಿಲ್ಲದೆ ಬದುಕುತ್ತಿದ್ದಾರೆ. ಅನಗತ್ಯ ಚಿಂತೆ, ಹಿತ ಮಿತ ಆಹಾರ, ಶಿಸ್ತು ಬದ್ಧ ಜೀವನ ಶೈಲಿಯಿಂದ ನೆಮ್ಮದಿ ಕಂಡುಕೊಳ್ಳಬಹುದು ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ವೈದ್ಯರುಡಾ|| ಸಿ.ಆರ್.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಡಾ|| ಎಸ್.ಪಿ.ಗುರುದಾಸ್ ಇವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ಮನೋವೈದ್ಯರು ಹಾಗೂ ಸಾಹಿತಿ ಡಾ|| ಸಿ.ಆರ್.ಚಂದ್ರಶೇಖರ್ ರವರನ್ನು ಕುರಿತು ಅಭಿನಂದನಾ ಮಾತುಗಳನ್ನಾಡಿದರು.
ಸಂವಾದ ಕಾರ್ಯಕ್ರಮದ ಸಮನ್ವಯ ಮತ್ತು ನಿರ್ವಹಣೆಯ ಬಗ್ಗೆ ಕಾರ್ಯಕ್ರವನ್ನು ಶ್ರೀಮತಿ ರತ್ನಾವತಿಜೆ.ಬೈಕಾಡಿ ಹಾಗೂ ಶ್ರೀ ಭರತ್‍ಜೆ.ಬೈಕಾಡಿಯವರು ನಿರ್ವಹಿಸಿದರು.
ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಪಿ.ಉಪೇಂದ್ರ ಆಚಾರ್ಯರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ವ್ಯವಸ್ಥಾಪಕರು ಶ್ರೀ ಯಜ್ಞೇಶ್ವರ, ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಶ್ರೀ ಉಮೇಶ್ ಆಚಾರ್ಯ, ಬೆಂಗಳೂರು ವಿರಾಟ್ ವಿಶ್ವಗ್ಲೋಬಲ್ ಫೌಂಡೇಶನ್ ಅಧ್ಯಕ್ಷ ಶ್ರೀ ಎಸ್. ಮಾಳಿಗಾಚಾರ್, ಬೆಂಗಳೂರಿನ ಲೆಕ್ಕಪರಿಶೋಧಕ ಹಾಗೂ ಕಾನೂನು ಸಲಹೆಗಾರಡಾ|| ಸಿ.ಎ. ನಾಗರಾಜ ಆಚಾರ್ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು. ನಿರ್ದೇಶಕರಾದ, ಶ್ರೀ ವಿ.ಜಯ ಆಚಾರ್, ಶ್ರೀ ಕೆ. ಶಶಿಕಾಂತ ಆಚಾರ್ಯ, ಶ್ರೀ ಮಲ್ಲಪ್ಪಎನ್. ಪತ್ತಾರ್, ಶ್ರೀಮತಿ ರೋಹಿಣಿ ಎಂ.ಪಿ., ಶ್ರೀಮತಿ ಜ್ಯೋತಿ ಎಂ. ವಿ., ಶ್ರೀ ರಮೇಶ್ ರಾವ್ ಯು., ಶ್ರೀ ಕೆ.ಪ್ರಕಾಶ ಆಚಾರ್ಯ,ಶ್ರೀ ಮಂಜುನಾಥ ಆಚಾರ್ಯ ಮತ್ತು ಶ್ರೀ ಚಂದ್ರಶೇಖರ್‍ಎ.ಎಸ್.ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕರಾದ ಶ್ರೀ ವೈ.ವಿ.ವಿಶ್ವಜ್ಞಮೂರ್ತಿಯವರು ಪ್ರಾರ್ಥನೆ ಗೈದರು, ಉಪಾಧ್ಯಕ್ಷರಾದ ಶ್ರೀ ಎ. ಆನಂದ ಆಚಾರ್ಯರು ಸ್ವಾಗತಿಸಿದರು ಹಾಗೂ ನಿರ್ದೇಶಕರಾದ ಶ್ರೀ ಕೆ.ಯಜ್ಞೇಶ್ವರ ಆಚಾರ್ಯರು ವಂದಿಸಿದರು.ಶ್ರೀ ಶ್ರೀಕಾಂತ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಅಧ್ಯಕ್ಷರಾಗಿ ಶ್ರೀ ಪಿ.ಉಪೇಂದ್ರ ಆಚಾರ್ಯ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಎ. ಆನಂದ ಆಚಾರ್ಯ ಮುಂದಿನ 5 ವರ್ಷಗಳ ಅವಧಿಯ ವರೆಗೆ ಅವಿರೋಧವಾಗಿ ಅಯ್ಕೆಯಾಗಿರುತ್ತಾರೆಂದು ರಿಟರ್ನಿಂಗ್ ಅಧಿಕಾರಿಯಾದ ಶ್ರೀ ಶಿವಲಿಂಗಯ್ಯ ಎಂ ಇವರು ಘೋಷಿಸಿದರು.
ಸೊಸೈಟಿಯ ನಿರ್ದೇಶಕರುಗಳಾದ ಶ್ರೀ ಕೆ.ಯಜ್ಞೇಶ್ವರ ಆಚಾರ್ಯ, ಶ್ರೀ ವೈ.ವಿ.ವಿಶ್ವಜ್ಞಮೂರ್ತಿ, ಶ್ರೀ ವಿ.ಜಯ ಆಚಾರ್, ಶ್ರೀ ಕೆ. ಶಶಿಕಾಂತ ಆಚಾರ್ಯ, ಶ್ರೀ ಮಲ್ಲಪ್ಪ ಎನ್ ಪತ್ತಾರ್, ಶ್ರೀಮತಿ ರೋಹಿಣಿ ಎಂ.ಪಿ., ಶ್ರೀಮತಿ ಜ್ಯೋತಿ ಎಂ.ವಿ., ಶ್ರೀ ರಮೇಶ್ ರಾವ್ ಯು. ಶ್ರೀ ಪ್ರಕಾಶ್ ಆಚಾರ್ಯ ಕೆ, ಶ್ರೀ ಮಂಜುನಾಥ ಆಚಾರ್ಯ ಹಾಗೂ ಶ್ರೀ ಚಂದ್ರಶೇಖರ ಎ.ಎಸ್ ಶುಭ ಹಾರೈಸಿದರು.
ಪ್ರಧಾನವ್ಯವಸ್ಥಾಪಕರು, ಶಾಖಾವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದರು.